ನವದೆಹಲಿ :ದೇಶದ ಪ್ರಖ್ಯಾತ ಶೆಟ್ಲರ್ ಪಿ ವಿ ಸಿಂಧು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕ್ರೀಡೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು. ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದು ದೇಶದ ಗೌರವ ಹೆಚ್ಚಿಸಿದ್ದ ಪಿ ವಿ ಸಿಂಧು ಜತೆ ಪ್ರಧಾನಿ ಅವರ ನಿವಾಸದಲ್ಲಿ ಉಪಾಹಾರ ಸವಿದರು.
ಈ ವೇಳೆ ಇಬ್ಬರು ಕ್ರೀಡಾ ಬೆಳವಣಿಗೆಗಳ ಬಗ್ಗೆ ಸಮಾಲೋಚಬೆ ನಡೆಸಿದರು. ಈ ಸಂದರ್ಭದಲ್ಲಿ ತಾವು ವಿಶಾಖಪಟ್ಟಣದಲ್ಲಿ ಕ್ರೀಡಾ ಅಕಾಡೆಮಿ ಹಾಗೂ ಕ್ರೀಡಾ ತರಬೇತಿ ಶಾಲೆ ಆರಂಭಿಸುವ ಆಲೋಚನೆ ಇರುವುದಾಗಿ ಪ್ರಧಾನಿ ಗಮನಕ್ಕೆ ತಂದರು. ಈ ಬಗ್ಗೆ ಸಿಂಧು ಪ್ರಧಾನಿ ಬಳಿ ತಮ್ಮ ಮನದಿಂಗಿತ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಜತೆಗೆ ಪಿ ವಿ ಸಿಂಧು ಇದನ್ನೋ ಓದಿ : ICC Test Rankings : ಕೇನ್ ವಿಲಿಯಮ್ಸನ್ ಅಗ್ರಸ್ಥಾನ, ಟಾಪ್-10ನಲ್ಲಿ ಮೂವರು ಭಾರತೀಯರು
ಪ್ರಧಾನಿಗಳ ಜತೆ ತಾವು ಮಾತನಾಡಿರುವ ವಿಷಯವನ್ನು ಇಂದು ಅವರು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪ್ರಧಾನಿ ಜತೆಗಿನ ಸಮಾಲೋಚನೆ ನನಗೆ ವಿಶೇಷವಾಗಿತ್ತು. ಇದು ಸದಾ ನೆನಪಿನಲ್ಲಿರುವಂತಹದ್ದು. ದೇಶದಲ್ಲಿ ಬಾಡ್ಮಿಂಟನ್ ಬೆಳವಣಿಗೆ ಕುರಿತು ಚರ್ಚೆ ಮಾಡಿದ್ದೇನೆ ಎಂದು ಅವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು, ಪ್ರಧಾನಿ ಜೊತೆಗಿನ ಮಾತುಕತೆ ವೇಳೆ, ಮೋದಿಜಿ ಅವರು ದಕ್ಷಿಣ ಕೊರಿಯಾದ ಕೋಚ್ ಪರ್ಕ್ ತಾ ಸಂಗ್ ಅವರ ಬಗ್ಗೆ ಕೇಳಿದ್ದರು. ಅಷ್ಟೇ ಅಲ್ಲ, ನಿಮ್ಮ ಕೋಚ್ಗೆ ಅಯೋಧ್ಯಾದ ಬಗ್ಗೆ ಏನಾದರೂ ಗೊತ್ತಾ ಎಂಬ ಬಗ್ಗೆಯೂ ಪ್ರಧಾನಿ ಕೇಳಿದರು ಎಂದು ಸಿಂಧು ಹೇಳಿಕೊಂಡಿದ್ದಾರೆ. ಶುಕ್ರವಾರ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ್ದ ಪಿ ವಿ ಸಿಂಧು, ಕ್ರೀಡಾ ಅಕಾಡೆಮಿ ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದ್ದರು.