ಚೆನ್ನೈ(ತಮಿಳುನಾಡು):ನಿವೃತ್ತ ನ್ಯಾಯಮೂರ್ತಿಯೊಬ್ಬರ ಮನೆಗೆ ದರೋಡೆ ಮಾಡಲು ಬಂದಿದ್ದ ಖದೀಮರು, ಮನೆಯಲ್ಲಿ ಯಾರು ಇಲ್ಲದಿರುವುದನ್ನು ತಿಳಿದು ಮೂರು ದಿನ ಅಲ್ಲೇ ಇದ್ದು, ಪಾರ್ಟಿಯನ್ನೂ ಮಾಡಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಜ್ಞಾನಪ್ರಕಾಶ್ (79) ಪೂನಾಮಲ್ಲಿ ಸನ್ನತಿ ಬೀದಿಯ ನಿವಾಸದಲ್ಲಿ ಕಳ್ಳರು ಈ ಕೃತ್ಯ ಎಸಗಿದ್ದಾರೆ.
ನ್ಯಾಯಮೂರ್ತಿ ಜ್ಞಾನಪ್ರಕಾಶ್ 15 ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಅಣ್ಣಾ ನಗರದಲ್ಲಿ ಅವರಿಗೆ ಮನೆ ಇತ್ತು. ಅಲ್ಲಿಗೆ ಆಗಾಗ ಭೇಟಿ ನಿಡುತ್ತಿದ್ದರು. ಅದರಂತೆ 29ರಂದು ಮನೆಗೆ ಬಂದಾಗ ಬೀಗ ಮುರಿದು, ಮನೆಯಲ್ಲಿದ್ದ 5ಲಕ್ಷ ಹಣ ಮತ್ತು 5 ಲಕ್ಷ ಮೌಲ್ಯದ ಆಭರಣ ದೋಚಿರುವುದು ತಿಳಿದು ಬಂದಿದೆ. ನಂತರ ಅಣ್ಣಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಚೆನ್ನೈ: ನಿವೃತ್ತ ನ್ಯಾಯಾಧೀಶರ ಮನೆಯಲ್ಲಿ ಕಳ್ಳತನ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಿದ ಅಣ್ಣಾನಗರದ ಪೊಲೀಸ್ ಆಯುಕ್ತ ಸಿಸಿಟಿವಿ ವಿಡಿಯೋ ಆಧಾರದಲ್ಲಿ ನೇಪಾಳಿ ಪ್ರಜೆ ಭುವನೇಶ್ವರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ನೇಪಾಳದ ಲಾಲ್, ಗಣೇಶನ್ ಮತ್ತು ಬದ್ರಾಯಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ದರೋಡೆಕೋರರ ಮೊಬೈಲ್ ಸಿಗ್ನಲ್‌ಗಳು ಬೆಂಗಳೂರು, ಹೈದರಾಬಾದ್ ಸೇರಿದಂತೆ ನಗರಗಳನ್ನು ತೋರಿಸಿದೆ.
ದರೋಡೆಕೋರರು ಮಾ.22ರಂದು ನಿವೃತ್ತ ನ್ಯಾಯಮೂರ್ತಿಯ ಮನೆಗೆ ನುಗ್ಗಿ ಮದ್ಯ ಸೇವಿಸಿದ್ದರು. ಎರಡನೇ ದಿನ ಚಿನ್ನ, ಬೆಳ್ಳಿ ದೋಚಿದ್ದರು. ಲೂಟಿ ನಡೆದಿರುವುದು ಮಾ.29ರಂದು ನಿವೃತ್ತ ನ್ಯಾಯಮೂರ್ತಿ ಜ್ಞಾನಪ್ರಕಾಶ್ ಅವರಿಗೆ ಗೊತ್ತಾಗಿದೆ. ದರೋಡೆಯಲ್ಲಿ ಭಾಗಿಯಾಗಿರುವ ಇನ್ನೂ ಕೆಲವು ನೇಪಾಳೀಯರಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ. ದರೋಡೆಕೋರರಿಂದ ಹಣ ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಕುರಿತು ಚೆನ್ನೈ ಪೊಲೀಸರು ನೇಪಾಳ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಭಾರತ @75 ಸ್ವಾತಂತ್ರ್ಯದ ಅಮೃತ ಮಹೋತ್ಸವ: IHMHನಲ್ಲಿ ತಯಾರಾಗಿವೆ 75 ಬಗೆಯ ಬಿರಿಯಾನಿ