ಪಂಜಾಬ್ :ಆತ ದಿನಗೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದ್ರೆ, ಒಂದು ಲಾಟರಿ ಟಿಕೆಟ್ ಅವನ ಜೀವನದ ದಿಕ್ಕನ್ನೇ ಬದಲಿಸಿತು. ರಾತ್ರೋರಾತ್ರಿ ಆತ ಕೋಟ್ಯಧೀಶ್ವರನಾಗಿದ್ದಾನೆ.
ಪಠಾಣ್ಕೋಟ್ ಜಿಲ್ಲೆಯ ಅಖೊಟಾ ಗ್ರಾಮಕ್ಕೆ ಸೇರಿದ ಬೋದರಾಜ್ ಎಂಬ ಕೂಲಿ ಕಾರ್ಮಿಕನೊಬ್ಬ ನೂರು ರೂಪಾಯಿ ನೀಡಿ ಒಂದು ಲಾಟರಿ ಕೊಂಡುಕೊಂಡಿದ್ದ. ಏಪ್ರಿಲ್ 14ಕ್ಕೆ ಲೂಧಿಯಾನಾದಲ್ಲಿ ಈ ಲಾಟರಿ ಡ್ರಾ ನಡೆದಿದೆ.
ಅದರಲ್ಲಿ ಬೋದರಾಜ್ 1 ಕೋಟಿ ರೂಪಾಯಿಗೆ ಒಡೆಯನಾಗಿದ್ದ. ಈ ವಿಷಯವನ್ನು ಅಶೋಕ್ ಬಾವಾ ಎಂಬ ಲಾಟರಿ ನಿರ್ವಹಣಕಾರನೊಬ್ಬ ಬೋದರಾಜ್ಗೆ ಮಾಹಿತಿ ನೀಡಿದ್ದ. ಆದಷ್ಟು ಬೇಗ ಹಣ ಕೈಗೊಪ್ಪಿಸುವುದಾಗಿ ತಿಳಿಸಿದ್ದನು.
ಕೋಟಿ ರೂಪಾಯಿ ಗೆದ್ದ ಸಂತೋಷವನ್ನು ಕುಟುಂಬ ಸದಸ್ಯರೊಂದಿಗೆ ಬೋದರಾಜ್ ಹಂಚಿಕೊಂಡಿದ್ದಾನೆ. ಬಂದ ಹಣದಲ್ಲಿ ತನ್ನ ಮಕ್ಕಳಿಬ್ಬರಿಗೆ ಉತ್ತಮ ವಿದ್ಯಾಭ್ಯಾಸ ನೀಡುವುದಾಗಿ ತಿಳಿಸಿದ್ದಾನೆ.