ಮುಂಬೈ :ದೇಶದೊಳಗೆ ಯಾವುದೇ ರಾಜ್ಯಕ್ಕೆ ಹೋದರೂ ಮರು ನೋಂದಣಿ ಮಾಡಿಸಿಕೊಳ್ಳುವ ಅಗತ್ಯವಿಲ್ಲದೆ ಓಡಾಡಲು ನೆರವಾಗುವಂತೆ ಜಾರಿ ಮಾಡಲಾಗಿದ್ದ ಬಿಹೆಚ್ ಸಿರೀಸ್ನ ವಾಹನ ನಂಬರ್ ನೋಂದಣಿ ಆರಂಭವಾಗಿದೆ. ಮುಂಬೈನಲ್ಲಿ ಮೊದಲ ವಾಹನ ನೋಂದಣಿಯಾಗಿದೆ.
ಮಹಾರಾಷ್ಟ್ರ ಸಾರಿಗೆ ಖಾತೆ ರಾಜ್ಯ ಸಚಿವ ಸತೇಜ್ ಪಾಟೀಲ್ ಅವರ ಸಮ್ಮುಖದಲ್ಲಿ 'ಬಿಹೆಚ್' ಸರಣಿಯ ಮೊದಲ ನೋಂದಾಯಿತ ವಾಹನವನ್ನು ಅನಾವರಣಗೊಳಿಸಲಾಯಿತು. ಆರ್ಸಿಎಫ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಯ ವಾಹನವನ್ನು ಈ ಸರಣಿಯಲ್ಲಿ ನೋಂದಾಯಿಸಲಾಗಿದೆ.
ಆರ್ಸಿಎಫ್ನಲ್ಲಿ ಕೆಲಸ ಮಾಡುತ್ತಿರುವ ಶ್ರದ್ಧಾ ಸುತೆ ಎಂಬುವರ ವಾಹನವನ್ನು ಹೊಸ ಬಿಹೆಚ್ ಸರಣಿಯ ಪ್ರಕಾರ ನೋಂದಾಯಿಸಲಾಗಿದೆ. ರಾಜ್ಯ ಸಾರಿಗೆ ಸಚಿವರ ಸಮನ್ವಯದಿಂದ ಕೇವಲ ಎಂಟು ದಿನಗಳಲ್ಲಿ ಸಂಪೂರ್ಣ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಸುತೆ ತಿಳಿಸಿದ್ದಾರೆ.