ಕೋಟಾ(ರಾಜಸ್ಥಾನ):ರಾಜಸ್ಥಾನದ ಕೋಟಾದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಮೂರು ದಿನಗಳ ಹಿಂದಷ್ಟೇ ಒಂದೇ ದಿನದಲ್ಲಿ 12 ಜನರ ಮೇಲೆ ದಾಳಿ ಮಾಡಿದ್ದ ನಾಯಿ, ಇಂದು 6 ಮಕ್ಕಳ ಮೇಲೆ ಎರಗಿ ತೀವ್ರ ಗಾಯಗೊಳಿಸಿದೆ. ಅದರಲ್ಲಿ ಇಬ್ಬರು ಮಕ್ಕಳ ಮುಖಕ್ಕೆ ಕಚ್ಚಿದ್ದು, ಕೆನ್ನೆಯನ್ನು ಹರಿದು ತಿಂದಿದೆ.
ಮನೆಯ ಮುಂದೆ ಮಲಗಿಸಿದ್ದಾಗ ದಾಳಿ ಮಾಡಿದ ನಾಯಿಯೊಂದು ಒಂದೂವರೆ ವರ್ಷದ ಮಗುವಿನ ಮುಖಕ್ಕೆ ಕಚ್ಚಿದೆ. ತನ್ನ ಕೋರೆ ಹಲ್ಲಿನಿಂದ ಕೆನ್ನೆಯನ್ನೇ ಹರಿದು ಹಾಕಿದೆ. ಇನ್ನೊಂದು ಮಗುವಿನ ಮೇಲೂ ದಾಳಿ ಮಾಡಿದ ನಾಯಿ ಮುಖಕ್ಕೆ ಗಂಭೀರ ಗಾಯ ಮಾಡಿದೆ.