ಲೂಧಿಯಾನ (ಪಂಜಾಬ್): ಬೈಕ್‌ಗಳ ಮಾಡಿಫೈ ಮೂಲಕವೇ ಪಂಜಾಬ್ನ ಲೂಧಿಯಾನದ ಯುವಕ ದೇಶ ಮಾತ್ರವಲ್ಲ ವಿದೇಶದಲ್ಲೂ ಗಮನ ಸೆಳೆದಿದ್ದಾರೆ. ಮರು ವಿನ್ಯಾಸಗೊಳಿಸಿದ ಬೈಕ್ಗಳನ್ನು ಬಾಲಿವುಡ್ ನಟರು ಮತ್ತು ಕ್ರಿಕೆಟ್ ಆಟಗಾರರು ಖರೀದಿಸಿದ್ದು, ಕೆಲ ಬೈಕ್ಗಳು ದಕ್ಷಿಣ ಭಾರತದ ಸಿನಿಮಾಗಳಲ್ಲೂ ಬಳಕೆಯಾಗಿದೆ.
ಹೌದು, ಅನುಜ್ ಸೈನಿ ಎಂಬ ಯುವಕ ಕಳೆದ 11 ವರ್ಷಗಳಿಂದ ಬೈಕ್ ವಿನ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಬೈಕ್ ಮಾಡಿಫೈ ಮಾಡುವುದು ಕೇವಲ ಹವ್ಯಾಸವಾಗಿತ್ತು. ಆದರೆ, ಇದೇ ಈತನನ್ನು ದೊಡ್ಡ ಎತ್ತರಕ್ಕೆ ಕೊಂಡೊಯ್ದಿದೆ. ಅಚ್ಚರಿ ಎಂದರೆ ಇದಕ್ಕೆ ಎಂದು ಪ್ರತ್ಯೇಕವಾದ ತರಬೇತಿ ಪಡೆದಿಲ್ಲ ಮತ್ತು ಈತ ಯಾವುದೇ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿಲ್ಲ. ಆದರೂ, ಈತ ವಿನ್ಯಾಸಗೊಳಿಸಿದ ಬೈಕ್ಗಳು 20ರಿಂದ 25 ಲಕ್ಷ ರೂ.ವರೆಗೂ ಮಾರಾಟವಾಗುತ್ತಿವೆ.
ವಿಶೇಷ ಬೈಕ್ ವಿನ್ಯಾಸಗಾರ ಅನುಜ್ ಸೈನಿ ವಿದ್ಯಾರ್ಥಿ ಜೀವನದಿಂದಲೇ ಬೈಕ್‌ಗಳ ಬಗ್ಗೆ ಕ್ರೇಜ್ ಹೊಂದಿದ್ದ ಸೈನಿ 18 ಸಾವಿರ ರೂ.ನಿಂದ ಕೆಲಸ ಆರಂಭಿಸಿದ್ದ. ಸದ್ಯ ಈತನ ಗ್ಯಾರೇಜ್‌ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಬೈಕ್‌ಗಳಿವೆ. ಇವರೊಂದಿಗೆ 10 ಜನ ಕೆಲಸಗಾರರು ಇದ್ದು, ಪ್ರತಿಯೊಬ್ಬರಿಗೂ ಒಂದೊಂದು ಕೆಲಸವನ್ನು ಒದಗಿಸಿದ್ದಾರೆ. ಗ್ರಾಹಕರ ಬೇಡಿಕೆ ಅನುಸಾರವಾಗಿ ಬೈಕ್ಗಳನ್ನು ಸಿದ್ಧಪಡಿಸಿ ಕೊಡುತ್ತಾರೆ.
ವಿವಿಧ ಬಗೆ ವಿನ್ಯಾಸಗಳನ್ನು ನಾವೇ ತಯಾರಿಸಿ ಬೈಕ್ಗಳನ್ನು ಸಿದ್ಧ ಪಡಿಸುತ್ತೇವೆ. ಬಾಲಿವುಡ್ ನಟರೊಬ್ಬರು 20 ಲಕ್ಷ ರೂ. ಕೊಟ್ಟು ಬೈಕ್ ಖರೀದಿಸಿದ್ದಾರೆ. ಕೆಲ ಸೆಲಬ್ರಿಟಿಗಳೂ ಸಹ ಕೇಳಿ ವಿಶೇಷ ವಿನ್ಯಾಸದ ಬೈಕ್ಗಳನ್ನು ತಯಾರಿಸಿಕೊಂಡು ಖರೀದಿ ಮಾಡಿದ್ದಾರೆ. ಆದರೆ, ಒಪ್ಪಂದದ ಪ್ರಕಾರ ಅವರುಗಳ ಹೆಸರನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಅನುಜ್.
ಇದನ್ನೂ ಓದಿ:ಕಿರಿಯ - ಯುವ ನಾಯಕರು ಕಾಂಗ್ರೆಸ್ ತೊರೆಯುತ್ತಿರುವುದೇಕೆ?