ಕರ್ನಾಟಕ

karnataka

ETV Bharat / bharat

Encounter in Kulgam: ತಡರಾತ್ರಿ ಗುಂಡಿನ ದಾಳಿ.. ಉಗ್ರನೊಬ್ಬನನ್ನು ಹೊಡೆದುರುಳಿಸಿದ ಸೇನೆ!

Encounter in Kulgam: ಕಳೆದ ಹಲವು ದಿನಗಳಿಂದ ಕಣಿವೆ ನಾಡಿನಲ್ಲಿ ಉಗ್ರರ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದು, ರಾತ್ರಿ ನಡೆದ ಎನ್​ಕೌಟಂರ್​ನಲ್ಲಿ ಸೇನೆ ಉಗ್ರರನೊಬ್ಬನನ್ನು ಹೊಡೆದುರುಳಿಸಿದೆ.

terrorist neutralised in an encounter  terrorist neutralised in an encounter in Kulgam  encounter in Jammu and Kashmir  ಉಗ್ರನೊಬ್ಬನನ್ನು ಹೊಡೆದುರುಳಿಸಿದ ಸೇನೆ  ತಡರಾತ್ರಿ ಗುಂಡಿನ ದಾಳಿ  Encounter in Kulgam  ಕಣಿವೆ ನಾಡಿನಲ್ಲಿ ಉಗ್ರರ ಚಟುವಟಿಕೆ  ರಾತ್ರಿ ನಡೆದ ಎನ್​ಕೌಟಂರ್  ಸೇನೆ ಉಗ್ರರನೊಬ್ಬನನ್ನು ಹೊಡೆದುರುಳಿಸಿದೆ  ಉಗ್ರರು ಅಡಗಿರುವುದರ ಬಗ್ಗೆ ಖಚಿತ ಮಾಹಿತಿ  ಜಮ್ಮು ಮತ್ತು ಕಾಶ್ಮೀರ ಪೊಲೀಸ್​ ಇಲಾಖೆ ಟ್ವೀಟ್  ಪೊಲೀಸ್ ಸಿಬ್ಬಂದಿ ಸಹ ಗಾಯ
ತಡರಾತ್ರಿ ಗುಂಡಿನ ದಾಳಿ

By

Published : Jun 27, 2023, 7:10 AM IST

Updated : Jun 27, 2023, 7:16 AM IST

ಉಗ್ರನೊಬ್ಬನನ್ನು ಹೊಡೆದುರುಳಿಸಿದ ಸೇನೆ!

ಕುಲ್ಗಾಮ್​, ಜಮ್ಮು-ಕಾಶ್ಮೀರ:ಹಲವು ದಿನಗಳಿಂದ ತಣ್ಣಗಿದ್ದ ಭಯೋತ್ಪಾದಕರು ಮತ್ತೆ ಗಡಿಯಲ್ಲಿ ಉಪಟಳ ಶುರು ಮಾಡಿದ್ದಾರೆ. ತಡರಾತ್ರಿ ಕುಲ್ಗಾಮ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ (Encounter in Kulgam) ಭಯೋತ್ಪಾದಕನೊಬ್ಬನನ್ನು ಸೇನೆ ಹೊಡೆದುರುಳಿಸಿದೆ. ಭಾರತೀಯ ಸೇನೆ ಉಗ್ರನ ಗುರುತು ಪತ್ತೆ ಕಾರ್ಯದ ಬಗ್ಗೆ ತನಿಖೆ ಕೈಗೊಂಡಿದೆ.

ಹತನಾದ ಉಗ್ರರನಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಇತರ ಸಾಮಗ್ರಿಗಳನ್ನು ಯೋಧರು ವಶಪಡಿಸಿಕೊಂಡಿದ್ದಾರೆ. ಗುಂಡಿನ ದಾಳಿ ನಡೆದ ಸ್ಥಳದ ಸುತ್ತಮುತ್ತ ಸೇನೆ ಶೋಧ ಕಾರ್ಯಾಚರಣೆ ಮುಂದುವರಿಸಿದೆ. ಈ ಎನ್​ಕೌಂಟರ್​ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ ಎಂದು ಕಾಶ್ಮೀರ ವಲಯ ಪೊಲೀಸ್​ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಉಗ್ರರು ಅಡಗಿರುವುದರ ಬಗ್ಗೆ ಖಚಿತ ಮಾಹಿತಿ:ಹೌರಾದ ಕುಲ್ಗಾಮ್ ಪ್ರದೇಶದಲ್ಲಿ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆ ಉಗ್ರನೊಬ್ಬನನ್ನು ಹೊಡೆದುರುಳಿಸಿದೆ. ಅಷ್ಟೇ ಅಲ್ಲ ಈ ಎನ್‌ಕೌಂಟರ್‌ನಲ್ಲಿ ಒಬ್ಬ ಪೊಲೀಸ್ ಸಹ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಉಗ್ರನೊಬ್ಬ ಸ್ಥಳೀಯ ವಾಸಿಯ ಜನರೊಂದಿಗೆ ವಾಸಿಸುತ್ತಿದ್ದನು. ಮನೆಯೊಂದರಲ್ಲಿದ್ದ ಉಗ್ರನ ಬಗ್ಗೆ ಭದ್ರತಾ ಪಡೆಗಳಿಗೆ ಖಚಿತ ಮಾಹಿತಿ ದೊರೆತ್ತಿತ್ತು. ಕೂಡಲೇ ಪೊಲೀಸರು ಮತ್ತು ಸೇನೆ ಜಂಟಿ ಕಾರ್ಯಾಚರಣೆ ಕೈಗೊಂಡು ಮನೆ ಸುತ್ತುವರಿದಿತ್ತು. ಉಗ್ರನು ಸೇನೆಯನ್ನು ನೋಡಿ ಗುಂಡಿನ ದಾಳಿ ಆರಂಭಿಸಿದ್ದಾನೆ. ಇದಕ್ಕೆ ಪ್ರತ್ಯುತ್ತರವಾಗಿ ಸೇನೆ ಸಹ ಗುಂಡಿನ ದಾಳಿ ನಡೆಸಿತ್ತು.

ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್​ ಇಲಾಖೆ ಟ್ವೀಟ್ ಮಾಡಿ, ಈ ಗುಂಡಿನ ದಾಳಿಯಲ್ಲಿ ಒಬ್ಬ ಸ್ಥಳೀಯ ಉಗ್ರನನ್ನು ಹೊಡೆದುರುಳಿಸಲಾಗಿದೆ. ಹಾಗೇ ಒಬ್ಬ ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ. ಪಡೆಗಳು ಇಡೀ ಪ್ರದೇಶದ ಸುತ್ತಮುತ್ತ ಶೋಧ ಕಾರ್ಯಾಚರಣೆ ಮುಂದುವರಿಸಿವೆ ಎಂದು ತಿಳಿಸಿದ್ದಾರೆ.

ಮಹಿಳೆಯರು ಮತ್ತು ಮಕ್ಕಳು, ನಿರಾಯುಧ ಪೊಲೀಸರು ಮತ್ತು ಹೊರಗಿನ ಕಾರ್ಮಿಕರು ಸೇರಿದಂತೆ ಅಮಾಯಕ ನಾಗರಿಕರನ್ನು ಗುರಿಯಾಗಿಸುವ ಮೂಲಕ ಕಣಿವೆಯಲ್ಲಿ ಶಾಂತಿಯನ್ನು ತರುವ ನಮ್ಮ ಪ್ರಯತ್ನಗಳನ್ನು ಭಯೋತ್ಪಾದಕರು ತಡೆಯಲು ಸಾಧ್ಯವಿಲ್ಲ. ನಮ್ಮ CT ಕಾರ್ಯಾಚರಣೆಗಳು ಕಾಶ್ಮೀರದ ಎಲ್ಲಾ 3 ಪ್ರದೇಶಗಳಲ್ಲಿ ವಿಶೇಷವಾಗಿ ವಿದೇಶಿ ಭಯೋತ್ಪಾದಕರ ವಿರುದ್ಧ ಏಕಕಾಲದಲ್ಲಿ ಮುಂದುವರಿಯುತ್ತದೆ ಎಂದು ಕಾಶ್ಮೀರ ಐಜಿಪಿ ಅವರು ಟ್ವೀಟ್​ ಮಾಡಿದ್ದಾರೆ.

ಗುಂಡಿನ ದಾಳಿ ನಡೆದ ಪ್ರದೇಶದಲ್ಲಿ ನಾಗರಿಕರು ಭಯಭೀತರಾಗಿದ್ದಾರೆ. ಮನೆಯ ಕಿಟಕಿ ಗಾಜುಗಳು ಗುಂಡೇಟಿಗೆ ಪುಡಿ - ಪುಡಿಯಾಗಿವೆ. ಸದ್ಯ ಉಗ್ರನ ಮೃತ ದೇಹವನ್ನು ಸೇನೆ ವಶಪಡಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದೆ. ಗುಂಡಿನ ದಾಳಿ ನಡೆದ ಮನೆಯ ಸುತ್ತ-ಮುತ್ತ ನಾಗರಿಕರು ಜಮಾಯಿಸಿದ್ದರು.

ಓದಿ:Militants infiltrate: ಗಡಿ ದಾಟಲು ಯತ್ನಿಸಿದ ಉಗ್ರರ ಮೇಲೆ ದಾಳಿ, ಚಕಮಕಿಯಲ್ಲಿ ಯೋಧನಿಗೆ ಗಾಯ

ಐವರು ವಿದೇಶಿ ಉಗ್ರರನ್ನು ಹೊಡೆದುರುಳಿಸಿದ ಸೇನೆ:ಕೆಲ ದಿನಗಳ ಹಿಂದೆ ಕುಪ್ವಾರದ ಮಚ್ಚಲ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ನುಸುಳಲು ಯತ್ನಿಸುತ್ತಿದ್ದ ಐವರು ವಿದೇಶಿ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಸೇನೆ ಮತ್ತೊಂದು ಉಗ್ರರನನ್ನು ಹೊಡೆದುರುಳಿಸಿದೆ.

Last Updated : Jun 27, 2023, 7:16 AM IST

ABOUT THE AUTHOR

...view details