ಅನಂತ್‌ನಾಗ್(ಜಮ್ಮು ಮತ್ತು ಕಾಶ್ಮೀರ): ಕೇಂದ್ರಾಡಳಿತ ಪ್ರದೇಶದಲ್ಲಿ ಉಗ್ರರ ಉಪಟಳ ಮಿತಿ ಮೀರುತ್ತಿದೆ. ನಿನ್ನೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. ಇದೇ ವೇಳೆ ಓರ್ವ ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಘಟನೆ ಅನಂತನಾಗ್ ಜಿಲ್ಲೆಯ ಖಾಗುಂಡ್ ವೆರಿನಾಗ್ ಪ್ರದೇಶದಲ್ಲಿ ನಡೆಯಿತು.
ಇದಕ್ಕೂ ಮುನ್ನ, ಉಗ್ರರ ಅಡಗುದಾಣ ಪತ್ತೆ ಹಚ್ಚಿದ ಪೊಲೀಸರು ಹಾಗು ಭದ್ರತಾ ಪಡೆಗಳ ಜಂಟಿ ತಂಡ ಆ ಪ್ರದೇಶವನ್ನು ಸುತ್ತುವರೆದಿತ್ತು. ಈ ವೇಳೆ ಗುಂಡಿನ ಚಕಮಕಿ ನಡೆದಿದೆ.