ಕರ್ನಾಟಕ

karnataka

ETV Bharat / bharat

ಸೆಲ್ಫಿ ತೆಗೆಯುವಾಗ ಜನರೇಟರ್​​ ಫ್ಯಾನ್​ಗೆ ಸಿಲುಕಿದ ಬಾಲಕಿ ಕೂದಲು: ಸ್ಥಿತಿ ಗಂಭೀರ - ಅಗ್ರಸೇನ್ ಜಯಂತಿ

ಅಲಿಗಢದಲ್ಲಿ ಹದಿಹರೆಯದ ಬಾಲಕಿ ಮೆರವಣಿಗೆ ವೇಳೆ ಸೆಲ್ಫಿ ತೆಗೆಯುವಾಗ, ಆಕೆಯ ಕೂದಲು ಜನರೇಟರ್‌ನ ಫ್ಯಾನ್‌ಗೆ ಸಿಲುಕಿಕೊಂಡಿದೆ. ಪರಿಣಾಮ ಆಕೆಯ ಚರ್ಮ ಸೇರಿ ಕೂದಲು ಕಿತ್ತು ಹೋಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಅಗ್ರಸೇನ್ ಜಯಂತಿ
ಅಗ್ರಸೇನ್ ಜಯಂತಿ

By

Published : Oct 3, 2022, 7:47 PM IST

ಅಲಿಗಢ (ಉತ್ತರ ಪ್ರದೇಶ):ಮಹಾರಾಜ ಅಗ್ರಸೇನ್ ಜಯಂತಿ ಹಿನ್ನೆಲೆ ಭಾನುವಾರ ಮೆರವಣಿಗೆ ನಡೆಸಲಾಗುತ್ತಿತ್ತು. ಈ ಮೆರವಣಿಗೆಯಲ್ಲಿ ಬಾಲಕಿಯೊಬ್ಬಳು ತನ್ನ ಕುಟುಂಬ ಸದಸ್ಯರೊಂದಿಗೆ ತೆರಳುತ್ತಿದ್ದಳು. ಇದರ ನಡುವೆ ಬಾಲಕಿ ಸೆಲ್ಫಿ ತೆಗೆಯಲು ಹೋದಾಗ ಆಕೆಯ ಕೂದಲು, ಮೆರವಣಿಗೆಯಲ್ಲಿ ಅಳವಡಿಸಲಾದ ಜನರೇಟರ್‌ನ ಫ್ಯಾನ್​ಗೆ ಸಿಕ್ಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಸೆಲ್ಫಿ ತೆಗೆಯುವಾಗ ಜನರೇಟರ್​ನ ಫ್ಯಾನ್​ಗೆ ಸಿಲುಕಿದ ಬಾಲಕಿ ಕೂದಲು

ಬಾಲಕಿ ಜೋರಾಗಿ ಕಿರುಚಿದ ತಕ್ಷಣ ಅಲ್ಲಿದ್ದ ಜನ ಆಕೆಯನ್ನು ರಕ್ಷಿಸಿ, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಗ್ರಸೇನ್ ಅವರ ಮೆರವಣಿಗೆಯು ನಗರದ ರೈಲ್ವೆ ರಸ್ತೆಯ ಮೂಲಕ ಮಾಮು - ಭಂಜಾ ಪ್ರದೇಶವನ್ನು ತಲುಪಿತ್ತು. ಈ ಸಮಯದಲ್ಲಿ, ಅಮಿತ್ ಅಗರ್ವಾಲ್, ತಮ್ಮ 13 ವರ್ಷದ ಮಗಳು ಆರುಷಿಯೊಂದಿಗೆ ಮಹಾರಾಜ ಅಗ್ರಸೇನ್ ಅವರ ಆರತಿ ವೀಕ್ಷಿಸುತ್ತಿದ್ದರು. ಈ ನಡುವೆ ಬಾಲಕಿ ಕೂದಲು ಜನರೇಟರ್ ಫ್ಯಾನ್​ಗೆ ಸಿಲುಕಿದೆ. ಚರ್ಮ ಸೇರಿದಂತೆ ತಲೆಯ ಮೇಲಿನ ಕೂದಲು ಕಿತ್ತು ಹೋಗಿದ್ದು, ತೀವ್ರ ರಕ್ತಸ್ರಾವವಾಗಿತ್ತು.

ಫೋಟೋ ಮತ್ತು ವಿಡಿಯೋ ಮಾಡುವಾಗ ಸಹೋದರಿ ಆರುಷಿಯ ಕೂದಲು ಜನರೇಟರ್‌ನ ಫ್ಯಾನ್‌ಗೆ ಸಿಲುಕಿಕೊಂಡಿತು ಎಂದು ಗಾಯಗೊಂಡ ಬಾಲಕಿಯ ಸಹೋದರ ಸೌರವ್ ಹೇಳಿದ್ದಾರೆ. ಆರುಷಿಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಐಸಿಯುನಲ್ಲಿ ಇಟ್ಟಿದ್ದಾರೆ.

ಇದನ್ನೂ ಓದಿ:ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.. ಕಾರಣ ಇದೆ ಅಂತೆ


ABOUT THE AUTHOR

...view details