ಕರ್ನಾಟಕ

karnataka

ETV Bharat / bharat

ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸಿ ಮಾಡಬಾರದ್ದನ್ನು ಮಾಡಿದ ಶಿಕ್ಷಕ ಅಂದರ್​ - ಶಿಕ್ಷಕ ಶಿವಪ್ರಸಾದ್ ದೇವಂಗನ್

ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸಿ ಶಿಕ್ಷಕನೊಬ್ಬ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿ ಬಂದಿದೆ.

ಶಿವಪ್ರಸಾದ್ ದೇವಂಗನ್​
ಶಿವಪ್ರಸಾದ್ ದೇವಂಗನ್​

By

Published : Aug 19, 2021, 10:43 PM IST

ಕವರ್ಧಾ (ಛತ್ತೀಸ್​ಗಡ): ಶಿಕ್ಷಕನೊಬ್ಬ ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಜಿಲ್ಲೆಯ ಲೋಹಾರ ಠಾಣಾ ವ್ಯಾಪ್ತಿಯ ಶಿಕ್ಷಕ ಶಿವಪ್ರಸಾದ್ ದೇವಂಗನ್​ ವಿರುದ್ಧ ಈ ದೂರು ಕೇಳಿ ಬಂದಿದೆ.

ಆರೋಪಿ ಶಿಕ್ಷಕ ಶಿವಪ್ರಸಾದ್ ದೇವಂಗನ್ ನಿತ್ಯ ನಾಲ್ಕೈದು ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸಿ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನಂತೆ. ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿನಿಯರು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ.

ಪೋಷಕರು ಶಾಲೆಗೆ ಯಾಕೆ ಹೋಗುತ್ತಿಲ್ಲವೆಂದು ಪ್ರಶ್ನಿಸಿದಾಗ, ಮಕ್ಕಳು ಶಿಕ್ಷಕನ ‘ಲೈಂಗಿಕ ಕಿರುಕುಳ’ದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಕೂಡಲೇ ಪೋಷಕರು ಲೋಹಾರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ಸೆಕ್ಷನ್ 354 (ಪೊಕ್ಸೊ ಕಾಯ್ದೆ) ರಡಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಎರಡು ಮದುವೆಯಾಗಿದ್ದವಳ ಜೊತೆ ಲವ್ವಿ ಡವ್ವಿ: ಮತ್ತೊಬ್ಬನ ಜೊತೆ ರಂಗಿನಾಟ ಆಡಿದ್ದಕ್ಕೆ ಯುವಕ ಆತ್ಮಹತ್ಯೆ

ಶಿಕ್ಷಕನ ವಿರುದ್ಧ ಕೇಳಿ ಬಂದಿರುವ ಈ ಆರೋಪಕ್ಕೆ ಶಿಕ್ಷಣ ಇಲಾಖೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ABOUT THE AUTHOR

...view details