ಕರ್ನಾಟಕ

karnataka

ETV Bharat / bharat

'ಐಬಿ' ಮುಖ್ಯಸ್ಥರಾಗಿ ತಪನ್‌ ದೇಕಾ ನೇಮಕ.. 'ರಾ'ಮುಖ್ಯಸ್ಥ ಗೋಯೆಲ್ ಅಧಿಕಾರಾವಧಿ ವಿಸ್ತರಣೆ

'ಐಬಿ' ನೂತನ ಮುಖ್ಯಸ್ಥರಾಗಿ ತಪನ್ ಕುಮಾರ್ ದೇಕಾ ನೇಮಕವಾಗಿದ್ದಾರೆ ಮತ್ತು 'ರಾ' ಮುಖ್ಯಸ್ಥ ಸಮಂತ್ ಕುಮಾರ್ ಗೋಯೆಲ್ ಅವರ ಅಧಿಕಾರಾವಧಿ ಒಂದು ವರ್ಷ ವಿಸ್ತರಿಸಲಾಗಿದೆ..

Tapan Deka to be new IB chief, RAW chief Goel gets year's extension
'ಐಬಿ' ಮುಖ್ಯಸ್ಥರಾಗಿ ತಪನ್ ದೇಕಾ ನೇಮಕ, 'ರಾ' ಮುಖ್ಯಸ್ಥ ಗೋಯೆಲ್ ಅಧಿಕಾರಾವಧಿ ವಿಸ್ತರಣೆ

By

Published : Jun 24, 2022, 8:29 PM IST

ನವದೆಹಲಿ :ಗುಪ್ತಚರ ವಿಭಾಗ (ಐಬಿ)ದ ನೂತನ ಮುಖ್ಯಸ್ಥರನ್ನಾಗಿ ಐಪಿಎಸ್ ಅಧಿಕಾರಿ ತಪನ್ ಕುಮಾರ್ ದೇಕಾ ಅವರನ್ನು ಶುಕ್ರವಾರ ನೇಮಿಸಲಾಗಿದೆ. ಇದೇ ವೇಳೆ 'ರಾ' (ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್) ಮುಖ್ಯಸ್ಥ ಸಮಂತ್ ಕುಮಾರ್ ಗೋಯೆಲ್ ಅವರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ.

ಹಿಮಾಚಲ ಪ್ರದೇಶದ ಕೇಡರ್​​ನ 1988ರ ಬ್ಯಾಚ್ ಅಧಿಕಾರಿ ಮತ್ತು ಈಶಾನ್ಯ ವ್ಯವಹಾರಗಳ ಪರಿಣಿತರಾದ ದೇಕಾ ಪ್ರಸ್ತುತ ಗುಪ್ತಚರ ಇಲಾಖೆಯ ಅಪರೇಷನಲ್​ ಡೆಸ್ಕ್​ನ ಮುಖ್ಯಸ್ಥರಾಗಿದ್ದರು. ಕಳೆದ ಎರಡು ದಶಕಗಳಿಂದ ಭಯೋತ್ಪಾದಕರು ಮತ್ತು ಧಾರ್ಮಿಕ ಮೂಲಭೂತವಾದ ಪತ್ತೆ ಹಚ್ಚುವುದರಲ್ಲಿ ತೊಡಗಿದ್ದಾರೆ.

ದೇಕಾ ಅವರ ನೇಮಕದ ಬಗ್ಗೆ ಸಚಿವ ಸಂಪುಟದ ನೇಮಕಾತಿ ಸಮಿತಿಯು ಅಧಿಸೂಚನೆ ಹೊರಡಿಸಿದೆ. ಗುಪ್ತಚರ ವಿಭಾಗದ ವಿಶೇಷ ನಿರ್ದೇಶಕರಾದ ಅರವಿಂದ ಕುಮಾರ್ ಅವರ ಅಧಿಕಾರಾವಧಿಯು 2022ರ ಜೂನ್​ 30ರಂದು ಮುಕ್ತಾಯವಾಗಲಿದೆ. ಅವರ ಸ್ಥಾನಕ್ಕೆ ತಪನ್ ಕುಮಾರ್ ದೇಕಾ ಅವರನ್ನು ನೇಮಿಸಲಾಗಿದೆ. ಮುಂದಿನ ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರಿಗೆ ದೇಕಾ ನಿರ್ದೇಶಕರಾಗಿ ಇರಲಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇತ್ತ, 'ರಾ' ಮುಖ್ಯಸ್ಥ ಗೋಯೆಲ್ ಅಧಿಕಾರಾವಧಿ ವಿಸ್ತರಣೆ ಬಗ್ಗೆಯೂ ಸಚಿವ ಸಂಪುಟದ ನೇಮಕಾತಿ ಸಮಿತಿಯು ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ. ಪಂಜಾಬ್ ಕೇಡರ್‌ನ 1984ರ ಬ್ಯಾಚ್‌ನ ಐಪಿಎಸ್​​ ಅಧಿಕಾರಿ ಸಮಂತ್ ಕುಮಾರ್ ಗೋಯೆಲ್ ಪ್ರಸ್ತುತ ಅಧಿಕಾರಾವಧಿಯನ್ನು ಒಂದು ವರ್ಷದ ಅವಧಿಗೆ ಅಂದರೆ 2023ರ ಜೂನ್​ 30ರವರೆಗೆ ವಿಸ್ತರಿಸಿ ಅನುಮೋದಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ:ಆಗಸದಲ್ಲೇ ಭಾರತೀಯ ಯುದ್ಧ ವಿಮಾನಗಳಿಗೆ ಇಂಧನ ಪೂರೈಸಿದ ಯುಎಇ ವಾಯುಪಡೆ

ABOUT THE AUTHOR

...view details