ಚೆನ್ನೈ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಮಿಳುನಾಡು ನಲುಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮತ್ತೆ ಚೆನ್ನೈ ಸೇರಿದಂತೆ ಕರಾವಳಿ ಭಾಗದಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಪ್ರಜೆಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ರಾಜ್ಯಪಾಲ ಆರ್.ಎನ್. ರವಿ ಅವರನ್ನು ಭೇಟಿಯಾಗಲಿದ್ದು, ಮಳೆಯಿಂದಾಗಿ ರಾಜ್ಯದಲ್ಲಿ ಉಂಟಾಗಿರುವ ಪರಿಸ್ಥಿತಿ ಕುರಿತು ಚರ್ಚಿಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಮಳೆ ಹಿನ್ನೆಲೆ ಚೆನ್ನೈ, ಕಾಂಚೀಪುರಂ, ಚೆಂಗಲ್ಪಟ್ಟು, ಟುಟಿಕೋರಿನ್, ತಿರುವಳ್ಳೂರು, ತಿರುನಲ್ವೇಲಿ, ಪುದುಕೊಟ್ಟೈ, ಸೇಲಂ, ತಿರುವಣ್ಣಾಮಲೈ, ಕಡಲೂರು, ವಿಲುಪ್ಪುರಂ, ಅರಿಯಲೂರ್, ರಾಮನಾಥಪುರಂ, ರನ್ನಿಪೆಟ್ಟೈ, ಕಲ್ಲಕ್ಕುರಿಚಿ, ತಂಜೋರ್, ನಾಗಪಟ್ಟಿಣಂ, ತಿರುವಾರೂರ್, ಪೆರಂಬಲೂರ್ ಮತ್ತು ಮೈಲಾಡುತುರೈ ತಿರುಚ್ಚಿಯಲ್ಲಿ ಶಾಲಾ - ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ.
ಆ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದ್ದರಿಂದ ರಜೆ ಘೋಷಿಸಲಾಗಿದೆ.