ಕರ್ನಾಟಕ

karnataka

ETV Bharat / bharat

1971ರ ಫೋಟೋವನ್ನು ಹಂಚಿಕೊಂಡ ಆಫ್ಘಾನಿಸ್ತಾನ: ಮತ್ತೆ ಇದೇ ಪುನರಾವರ್ತಿಸುತ್ತದೆ ಎಂದು ಪಾಕ್​ಗೆ ಎಚ್ಚರಿಕೆ - ಅಫ್ಘಾನಿಸ್ತಾನದ ಮೇಲೆ ದಾಳಿ

ಅಫ್ಘಾನ್​ ಮೇಲೆ ದಾಳಿ ಮಾಡಿದ್ರೆ ಹುಷಾರ್​-1971ರ ಯುದ್ಧ ಮರುಕಳಿಸುತ್ತೆ ಎಂದು ಪಾಕ್​ಗೆ ಎಚ್ಚರಿಕೆ ನೀಡಿದ ತಾಲಿಬಾನ್​- ಅಂದು ಭಾರತಕ್ಕೆ ಶರಣಾದ ಪಾಕ್​ ಸ್ಥಿತಿಯ ಫೋಟೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡ ತಾಲಿಬಾನ್​ ಹಿರಿಯ ನಾಯಕ

Taliban leader Ahmad Yasir warns Pakistan
1971ರ ಫೋಟೋವನ್ನು ಹಂಚಿಕೊಂಡ ಆಫ್ಘಾನಿಸ್ತಾನ

By

Published : Jan 3, 2023, 3:27 PM IST

ನವದೆಹಲಿ: ತಾಲಿಬಾನ್​ನ ಹಿರಿಯ ನಾಯಕರೊಬ್ಬರು ಫೋಟೋವೊಂದನ್ನು ಶೇರ್​ ಮಾಡುವ ಮೂಲಕ ಪಾಕಿಸ್ತಾನಕ್ಕೆ ಮುಜುಗರವನ್ನುಂಟು ಮಾಡಿದ್ದಾರೆ. ಭಾರತೀಯ ಪಡೆಗಳಿಗೆ ಪಾಕಿಸ್ತಾನದ ಮಿಲಿಟರಿ ಶರಣಾಗತಿಯಾಗುವ 1971ರ ಫೋಟೋವನ್ನು ತಾಲಿಬಾನ್​ ಹಂಚಿಕೊಳ್ಳುವ ಮೂಲಕ ಲೇವಡಿ ಮಾಡಿದೆ.

ಪಾಕಿಸ್ತಾನ ನಮ್ಮ ಮೇಲೆ ದಾಳಿ ಮಾಡಿದ್ರೆ, ಅದೇ ರೀತಿಯ ಸಂದರ್ಭವನ್ನು ಎದುರಿಸಬೇಕಾಗುತ್ತದೆ ಎಂದು ತಾಲಿಬಾನ್​ ಹೇಳಿದೆ. ಈ ಮೂಲಕ ಹಿರಿಯ ತಾಲಿಬಾನ್ ನಾಯಕ ಅಹ್ಮದ್ ಯಾಸಿರ್ ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

ಅಹ್ಮದ್ ಯಾಸಿರ್​ ಟ್ವೀಟ್​:ಪಾಕಿಸ್ತಾನದ ವಿದೇಶಾಂಗ ಮಂತ್ರಿಯವರೇ, ಅದ್ಭುತ ಸರ್! ಸಿರಿಯಾದಲ್ಲಿರುವ ಕುರ್ದಿಗಳನ್ನು ಗುರಿಯಾಗಿಸಲು ಆಫ್ಘಾನಿಸ್ತಾನ, ಸಿರಿಯಾ ಮತ್ತು ಪಾಕಿಸ್ತಾನವು ಟರ್ಕಿಯಲ್ಲ. ಇದು ಅಫ್ಘಾನಿಸ್ತಾನ, ಹೆಮ್ಮೆಯ ಸಾಮ್ರಾಜ್ಯ. ನಮ್ಮ ಮೇಲೆ ಮಿಲಿಟರಿ ದಾಳಿಯ ಬಗ್ಗೆ ಯೋಚಿಸಬೇಡಿ, ಇಲ್ಲದಿದ್ದರೆ ಭಾರತದೊಂದಿಗಿನ ಮಿಲಿಟರಿ ಒಪ್ಪಂದ ಮತ್ತೆ ಪುನರಾವರ್ತನೆಯಾಗುತ್ತದೆ ಎಂದು ಅಹ್ಮದ್ ಯಾಸಿರ್ ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:ಪಂಜಾಬ್‌ ಗಡಿಯಲ್ಲಿ ಪಾಕ್‌ ನುಸುಳುಕೋರನಿಗೆ ಬಿಎಸ್‌ಎಫ್‌ ಗುಂಡೇಟು

ಪೋಸ್ಟ್ ಜೊತೆಗೆ, ಅಹ್ಮದ್ ಯಾಸಿರ್ ಡಿಸೆಂಬರ್ 16, 1971 ರ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಅಲ್ಲಿ ಪಾಕಿಸ್ತಾನದ ಸೇನೆಯ ಲೆಫ್ಟಿನೆಂಟ್ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ, ಪೂರ್ವ ಪಾಕಿಸ್ತಾನದ (ಈಗ ಬಾಂಗ್ಲಾದೇಶ) ಮುಖ್ಯ ಮಾರ್ಷಲ್ ಲಾ ಅಡ್ಮಿನಿಸ್ಟ್ರೇಟರ್ 'ಸರೆಂಡರ್ ಆಫ್ ಇನ್ಸ್ಟ್ರುಮೆಂಟ್' ಗೆ ಸಹಿ ಹಾಕಿರುವುದನ್ನು ಕಾಣಬಹುದು. ಬಾಂಗ್ಲಾದೇಶದ ವಿಮೋಚನೆಗೆ ಭಾರತ ಸಹಾಯ ಮಾಡಿದ ದಿನವನ್ನು ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ.

ಇಸ್ಲಾಮಾಬಾದ್‌ಗೆ ಕಾನೂನು ಅಧಿಕಾರವಿದೆ: ಕೆಲವು ದಿನಗಳ ಹಿಂದೆ, ಪಾಕಿಸ್ತಾನದ ವಿದೇಶಾಂಗ ಸಚಿವ ರಾಣಾ ಸನಾವುಲ್ಲಾ ಅವರು ಅಫ್ಘಾನಿಸ್ತಾನದಲ್ಲಿ "ದಂಗೆಕೋರರ ಅಡಗುತಾಣಗಳ" ವಿರುದ್ಧ ಹೋರಾಡಲು ಇಸ್ಲಾಮಾಬಾದ್‌ಗೆ ಕಾನೂನು ಅಧಿಕಾರವಿದೆ ಎಂದು ಹೇಳಿದ್ದರು.

ಅಫ್ಘಾನಿಸ್ತಾನದಲ್ಲಿರುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಅಡಗುತಾಣಗಳನ್ನು ಕೆಡವಲು ಕಾಬೂಲ್ ಕ್ರಮ ಕೈಗೊಳ್ಳದಿದ್ದರೆ, ಇಸ್ಲಾಮಾಬಾದ್ ದಾಳಿ ನಡೆಸಬಹುದು ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

"ಈ ಸಮಸ್ಯೆಗಳು ಉದ್ಭವಿಸಿದಾಗ, ನಾವು ಮೊದಲು ನಮ್ಮ ಇಸ್ಲಾಮಿಕ್ ಸಹೋದರ ರಾಷ್ಟ್ರವಾದ ಅಫ್ಘಾನಿಸ್ತಾನವನ್ನು ಈ ಅಡಗುತಾಣಗಳನ್ನು ತೊಡೆದುಹಾಕಲು ಮತ್ತು ಈ ವ್ಯಕ್ತಿಗಳನ್ನು ನಮಗೆ ಹಸ್ತಾಂತರಿಸುವಂತೆ ಕೇಳುತ್ತೇವೆ. ಆದರೆ ಅದು ಸಂಭವಿಸದಿದ್ದರೆ, ನೀವು ಹೇಳಿದ್ದು ಸಾಧ್ಯ" ಎಂದು ರಾಣಾ ಸನಾವುಲ್ಲಾ ಹೇಳಿದ್ದಾರೆ.

ಅಧಿಕಾರಿಗಳು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ: ಈ ಪ್ರಚೋದನೆಗಳಿಗೆ ಪ್ರತಿಕ್ರಿಯೆಯಾಗಿ, ತಾಲಿಬಾನ್ ಭಾನುವಾರ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಅಫ್ಘಾನಿಸ್ತಾನವು ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಬಯಸುತ್ತದೆ ಮತ್ತು ಅದರ ಅಧಿಕಾರಿಗಳು ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.

"ಯಾವುದೇ ದೇಶವು ಮತ್ತೊಂದು ರಾಷ್ಟ್ರದ ಪ್ರದೇಶದ ಮೇಲೆ ದಾಳಿ ಮಾಡುವ ಹಕ್ಕನ್ನು ಹೊಂದಿಲ್ಲ. ಅಂತಹ ಉಲ್ಲಂಘನೆಯನ್ನು ಅನುಮತಿಸುವ ಯಾವುದೇ ಕಾನೂನು ಜಗತ್ತಿನಲ್ಲಿಲ್ಲ. ಯಾರಿಗಾದರೂ ಅಂತಹ ಚಿಂತೆಗಳಿದ್ದರೆ, ಅವರು ಇಸ್ಲಾಮಿಕ್ ಎಮಿರೇಟ್ನೊಂದಿಗೆ ಸಾಕಷ್ಟು ಪಡೆಗಳನ್ನು ಹೊಂದಿರುವುದರಿಂದ ಅವುಗಳನ್ನು ಹಂಚಿಕೊಳ್ಳಬೇಕು ಮತ್ತು ಕ್ರಮ ತೆಗೆದುಕೊಳ್ಳಬಹುದು ಎಂದು ಮುಜಾಹಿದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details