ಕರ್ನಾಟಕ

karnataka

By

Published : Mar 4, 2021, 12:44 PM IST

ETV Bharat / bharat

ಬಾಂಬೂ ಇಲ್ಲ ಏನೂ ಇಲ್ಲ: ಮತ್ತೆ ತಾಜ್​​ಮಹಲ್ ಓಪನ್​

ತಾಜ್​​ಮಹಲ್ ಒಳಗೆ ಬಾಂಬ್ ಇಲ್ಲ ಎಂಬುದು ಸ್ಪಷ್ಟವಾಗಿದ್ದು, ಹುಸಿ ಬೆದರಿಕೆ ಕರೆ ಮಾಡಿದ ವ್ಯಕ್ತಿಯಿರುವ ಸ್ಥಳವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

agra
ತಾಜ್​​ಮಹಲ್ ಈಗ ಪ್ರವೇಶ ಮುಕ್ತ

ಆಗ್ರಾ (ಉತ್ತರ ಪ್ರದೇಶ):ಪರಿಶೀಲನೆ ವೇಳೆ ಬಾಂಬ್​​ ಅಥವಾ ಯಾವುದೇ ಸ್ಫೋಟಕ ಪತ್ತೆಯಾಗದ ಹಿನ್ನೆಲೆ ಈಗ ಮತ್ತೆ ತಾಜ್​​ಮಹಲ್ ಅನ್ನು ಪ್ರವೇಶ ಮುಕ್ತಗೊಳಿಸಲಾಗಿದೆ.

ಅಪರಿಚಿತ ವ್ಯಕ್ತಿಯೊಬ್ಬ ಯುಪಿ ಪೊಲೀಸ್​ ಕಂಟ್ರೋಲ್​ ರೂಂಗೆ ಕರೆ ಮಾಡಿ, ಮಿಲಿಟರಿ ನೇಮಕಾತಿಯಲ್ಲಿ ತಾರತಮ್ಯವಾಗಿದ್ದು, ನನಗೆ ಅನ್ಯಾಯವಾಗಿದೆ. ಹೀಗಾಗಿ ತಾಜ್​​ಮಹಲ್ ಒಳಗೆ ಬಾಂಬ್ ಇಟ್ಟಿದ್ದು, ಅದು ಶೀಘ್ರದಲ್ಲೇ ಸ್ಫೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಿದ್ದ.

ತಾಜ್​​ಮಹಲ್ ಈಗ ಪ್ರವೇಶ ಮುಕ್ತ

ಇದನ್ನೂ ಓದಿ: ಪ್ರೇಮಸೌಧದಲ್ಲಿ ಬಾಂಬ್​​ ಇಟ್ಟಿರುವುದಾಗಿ ಫೋನ್​ ಕಾಲ್​: ತಾಜ್​​ಮಹಲ್ ಬಂದ್​

ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಪ್ರವಾಸಿಗರಿಗೆ ನಿರ್ಬಂಧ ಹೇರಿ, ತಾಜ್​​ಮಹಲ್ ಬಾಗಿಲುಗಳನ್ನು ಮುಚ್ಚಿ ಪರಿಶೀಲನೆ ಕೈಗೊಂಡಿದ್ದರು. ಆದರೆ ಪರಿಶೀಲನೆ ವೇಳೆ ಬಾಂಬ್​​ ಅಥವಾ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಹೀಗಾಗಿ ಅದು ಹುಸಿ ಕರೆಯಾಗಿದ್ದು, ಪುನಃ ತಾಜ್​​ಮಹಲ್ ಅನ್ನು ಪ್ರವೇಶ ಮುಕ್ತಗೊಳಿಸಲಾಗಿದೆ.

ಇನ್ನು ಹುಸಿ ಬೆದರಿಕೆ ಕರೆ ಮಾಡಿದ ವ್ಯಕ್ತಿಯಿರುವ ಸ್ಥಳ ಪತ್ತೆ ಮಾಡಲಾಗಿದ್ದು, ಆತ ಫಿರೋಜಾಬಾದ್​ನಲ್ಲಿರುವುದು ತಿಳಿದು ಬಂದಿದೆ. ಆತನನ್ನು ಶೀಘ್ರದಲ್ಲೇ ಹುಡುಕಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details