ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ವಿವಿಧ ರಾಜಕೀಯ ಪಕ್ಷಗಳಿಂದ ಚುನಾವಣಾ ಪ್ರಚಾರದ ಅಬ್ಬರ ಬಿರುಸುಗೊಂಡಿದೆ.
ಹೌದು, ಪಶ್ಚಿಮ ಬಂಗಾಳದ ಹೌರಾ ಜಿಲ್ಲೆ ಮೂಲದ ಮಿಠಾಯಿ ತಯಾರಕರಾದ ಮಾ ಗಂಧೇಶ್ವರಿ ಸ್ವೀಟ್ಸ್ ಅಂಗಡಿಯವರು, ಪಕ್ಷದ ಚಿಹ್ನೆಗಳನ್ನು ಹೊಂದಿರುವ ವಿವಿಧ ಬಗೆಯ ಸಿಹಿತಿಂಡಿಗಳನ್ನು ತಯಾರಿಸಿದ್ದಾರೆ.
ವಿವಿಧ ರಾಜಕೀಯ ಪಕ್ಷಗಳ ಚಿಹ್ನೆಗಳ ಬಣ್ಣವನ್ನು ಹೊಂದಿರುವ ಸಿಹಿತಿಂಡಿಗಳನ್ನು ತಯಾರಿಸಲಾಗಿದೆ. ಬಿಜೆಪಿಯ ಕಮಲದ ಚಿಹ್ನೆಯ ಬಣ್ಣವಾದ ಕೇಸರಿಯನ್ನು ಹೊಂದಿರುವ ಸಿಹಿತಿಂಡಿಗಳು, ತೃಣಮೂಲದ ಹಸಿರು ಬಣ್ಣದ "ಜೋರಾ ಘಾಸ್ ಫೂಲ್" ಚಿಹ್ನೆಯನ್ನು ಪ್ರದರ್ಶಿಸುವ ಸಿಹಿತಿಂಡಿ, ಕೆಂಪು ಬಣ್ಣದ "ಸುತ್ತಿಗೆ ಮತ್ತು ಕುಡಗೋಲು" ಅನ್ನು ಹೊಂದಿರುವ ವೈವಿಧ್ಯಮಯ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತಿದೆ.