ಕರ್ನಾಟಕ

karnataka

ETV Bharat / bharat

ನಟಿ ಸ್ವರಾ ಭಾಸ್ಕರ್​ಗೆ ಕೊಲೆ ಬೆದರಿಕೆ ಪತ್ರ: ಪೊಲೀಸರಿಂದ ತನಿಖೆ - ಪೊಲೀಸರಿಂದ ತನಿಖೆ

ಹಿಂದಿಯಲ್ಲಿ ಪತ್ರ ಬರೆಯಲಾಗಿದ್ದು, ಬೈಗುಳದ ಭಾಷೆಯನ್ನು ಬಳಸಲಾಗಿದೆ ಹಾಗೂ ಜೀವ ಬೆದರಿಕೆ ಹಾಕಲಾಗಿದೆ. ವೀರ ಸಾವರ್ಕರ್ ಅವರಿಗೆ ಅವಮಾನ ಮಾಡಿದ್ದನ್ನು ದೇಶದ ಯುವಜನತೆ ಸಹಿಸಲಾರರು ಎಂದು ಪತ್ರದಲ್ಲಿ ಹೇಳಲಾಗಿದೆ.

Swara Bhasker receives death threat, probe begins
Swara Bhasker receives death threat, probe begins

By

Published : Jun 30, 2022, 1:43 PM IST

ಮುಂಬೈ: ಬಾಲಿವುಡ್ ನಟಿ ಸ್ವರಾ ಭಾಸ್ಕರ್​ರಿಗೆ ಅನಾಮಧೇಯ ಪತ್ರದ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವರ್ಸೋವಾದಲ್ಲಿರುವ ನಟಿಯ ಮನೆಗೆ ಪತ್ರ ತಲುಪಿಸಲಾಗಿದ್ದು, ಪತ್ರ ನೋಡಿದ ನಂತರ ಸ್ವರಾ ಭಾಸ್ಕರ್ ವರ್ಸೋವಾ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅನಾಮಧೇಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹಿಂದಿಯಲ್ಲಿ ಪತ್ರ ಬರೆಯಲಾಗಿದ್ದು, ಬೈಗುಳದ ಭಾಷೆಯನ್ನು ಬಳಸಲಾಗಿದೆ ಹಾಗೂ ಜೀವ ಬೆದರಿಕೆ ಹಾಕಲಾಗಿದೆ. ವೀರ ಸಾವರ್ಕರ್ ಅವರಿಗೆ ಅವಮಾನ ಮಾಡಿದ್ದನ್ನು ದೇಶದ ಯುವಜನತೆ ಸಹಿಸಲಾರರು ಎಂದು ಪತ್ರದಲ್ಲಿ ಹೇಳಲಾಗಿದೆ. ದೇಶದ ಯುವಜನತೆ (Is desh ke naujawan) ಎಂದು ಕೊನೆಗೆ ಸಹಿ ಮಾಡಲಾಗಿದೆ.

ಸ್ವರಾ ಭಾಸ್ಕರ್ ಅವರಿಗೆ ಕೊಲೆ ಬೆದರಿಕೆ ಹಾಕಿ ಪತ್ರ ಬರೆದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನು ಓದಿ:ಭೀಕರ ಪ್ರವಾಹಕ್ಕೆ ನಲುಗಿದ ಅಸ್ಸೋಂ: 25 ಲಕ್ಷ ರೂ. ನೆರವು ನೀಡಿದ ನಟ ಅಮೀರ್ ಖಾನ್

ABOUT THE AUTHOR

...view details