ಕರ್ನಾಟಕ

karnataka

ETV Bharat / bharat

ಚಿನ್ನ ಲೇಪಿತ ಐಸ್‌ಕ್ರೀಮ್​ ತಿಂದಿದ್ದೀರಾ? ಇಲ್ಲಿದೆ ನೋಡಿ..

ಸೂರತ್‌ನಲ್ಲಿ 24 ಕ್ಯಾರಟ್ ಚಿನ್ನ ಲೇಪಿತ ಐಸ್‌ಕ್ರೀಮ್ ಸಿಗುತ್ತಿದೆ. ಆದರೆ, ಇದನ್ನು ತಿನ್ನುವ ಮೊದಲು ನಿಮ್ಮ ಪರ್ಸ್‌ನಲ್ಲಿ ದುಡ್ಡೆಷ್ಟಿದೆ ಎಂದು ಚೆಕ್‌ ಮಾಡಿಕೊಳ್ಳುವುದು ಒಳಿತು.

Gold Plated Ice Creams
ಚಿನ್ನದ ಲೇಪಿತ ಐಸ್ ಕ್ರೀಂ

By

Published : May 11, 2023, 7:23 AM IST

ಸೂರತ್‌ (ಗುಜರಾತ್):ಸೂರತ್‌ನಲ್ಲಿ ಬಿಸಿಲ ತಾಪದಿಂದ ತಪ್ಪಿಸಿಕೊಳ್ಳಲು ಜನರು ಬಗೆ ಬಗೆ ಐಸ್ ಕ್ರೀಮ್ ಹಾಗೂ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಐಸ್ ಕ್ರೀಮ್‌ಪ್ರಿಯರಿಗಾಗಿಯೇ ಸೂರತ್‌ನಲ್ಲೀಗ​ ವಿಶೇಷವಾದ ತಿನಿಸು ತಯಾರಾಗಿದೆ. ಇದು ಸಾಮಾನ್ಯವಾದ ಐಸ್ ಕ್ರೀಮ್​ ಅಲ್ಲ. ಇದನ್ನು 24 ಕ್ಯಾರಟ್ ಚಿನ್ನದ ಲೇಪನದಿಂದ ತಯಾರಿಸಲಾಗಿದೆ.

ಒಂದೆಡೆ ದಿನ ದಿನಕ್ಕೆ ಏರುತ್ತಿರುವ ಚಿನ್ನದ ಬೆಲೆ, ಮತ್ತೊಂದೆಡೆ ಹೆಚ್ಚುತ್ತಿರುವ ಬಿಸಿಲು. ಆದರೆ, ಇಲ್ಲಿನ ಜನತೆ ಈ ಎರಡೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ. ಬೇಸಿಗೆಯ ಮಧ್ಯದಲ್ಲಿ ಜನರು 24 ಕ್ಯಾರಟ್ ಚಿನ್ನದ ಲೇಪಿತ ಐಸ್ ಕ್ರೀಮ್ ಸವಿದು ಆನಂದಿಸುತ್ತಿದ್ದಾರೆ.

ಬೆಲೆ ಎಷ್ಟು ಗೊತ್ತೇ?:ಐಸ್ ಕ್ರೀಮ್ ಕೋನ್ ಅನ್ನು ವಿಶೇಷ ರೀತಿಯ ಚಿಕ್ಕ ಚಿಕ್ಕ ಚಿನ್ನದ ಚೆಂಡಿನಿಂದ ಅಲಂಕರಿಸಲಾಗಿದೆ. ಕೋನಿನೊಒಳಗೆ ವಿವಿಧ ರುಚಿಗಳಿವೆ. ಚಿನ್ನದ ಚಾಕೊಲೇಟ್ ಕೂಡ ಸೇರಿದೆ. ಮೇಲ್ಭಾಗದಲ್ಲಿ 24 ಕ್ಯಾರಟ್​ ಚಿನ್ನ ಮತ್ತು ಒಳಗೆ ಡ್ರೈಫ್ರೂಟ್ ಚೋಕೋನಿಂದ ಮುಚ್ಚಲಾಗಿದೆ. ಬೆಲೆ 1000 ರೂಪಾಯಿ ಇದೆ.

ನೀವು 18% ಜಿಎಸ್​ಟಿ ಸಹ ಪಾವತಿಸಬೇಕು. ಇಷ್ಟು ದುಬಾರಿಯಾದರೂ ಬೇಡಿಕೆ ಕಡಿಮೆಯಾಗಿಲ್ಲ. ಐಸ್ ಕ್ರೀಮ್ ತಿನ್ನಲು ಜನರು ದೂರದೂರುಗಳಿಂದ ಬರುತ್ತಿದ್ದಾರೆ. ಇದು ಹೋಮ್ ಡೆಲಿವರಿಗೆ ಸಿಗುವುದಿಲ್ಲ. ಅಂಗಡಿಗೇ ಬರಬೇಕು. ಏಕೆಂದರೆ ಇದನ್ನು ಆರ್ಡರ್ ನೀಡಿದ ತಕ್ಷಣವೇ ಸಿದ್ಧಪಡಿಸಲಾಗುತ್ತದೆ.

ಇದನ್ನೂ ಓದು:ಜೋಶಿ ಅಂಗಡಿಯಲ್ಲಿ ಹೊರಹೊಮ್ಮುವ ಕೊಳಲಿನ ನಾದ.. ಜಿತೇಂದ್ರ ಬಳಿ ಇವೆ ಲಕ್ಷ ಲಕ್ಷ ಬೆಲೆಯ ಫ್ಲೂಟ್ಸ್​

ABOUT THE AUTHOR

...view details