ನವದೆಹಲಿ:ಬಕ್ರೀದ್ ಆಚರಣೆಗಳಿಗೆ ಸಂಬಂಧಿಸಿದಂತೆ ಮೂರು ದಿನಗಳವರೆಗೆ ಕೋವಿಡ್ -19 ನಿಯಮಗಳನ್ನು ಕೇರಳ ಸರ್ಕಾರ ಸಡಿಲಿಸಿತ್ತು. ಈ ಬಗ್ಗೆ ಸುಪ್ರೀಂಕೋರ್ಟ್ ಸೋಮವಾರ ಸರ್ಕಾರಕ್ಕೆ ಖಾರವಾದ ಪ್ರಶ್ನೆ ಮಾಡಿತ್ತು. ನಿರ್ಬಂಧಗಳನ್ನು ಸಡಿಲಿಸಿರುವುದು ಏಕೆ ಎಂದು ವಿವರಿಸುವಂತೆ ಖಡಕ್ ಸೂಚನೆ ನೀಡಿತ್ತು. ಈ ಬಗ್ಗೆ ಇಂದು ಸರ್ಕಾರ ಸುಪ್ರೀಂಗೆ ಉತ್ತರ ನೀಡಿದೆ.
Covid ನಿರ್ಬಂಧ ಸಡಿಲಿಕೆ ವಿಚಾರ: ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ - ಕೋವಿಡ್ -19 ನಿಯಮ ಸಡಿಲಿಕೆ
ಕೋವಿಡ್ -19 ನಿಯಮಗಳನ್ನು ಕೇರಳ ಸರ್ಕಾರ ಸಡಿಲಿಕೆ ಮಾಡಿದ ಬೆನ್ನಲೇ ಕಾರಣ ನೀಡುವಂತೆ ನಿರ್ದೇಶನ ನೀಡಿದ್ದ ಸುಪ್ರೀಂಕೋರ್ಟ್ಗೆ ಇಂದು ಸರ್ಕಾರ ವಿವರಣೆ ನೀಡಿದೆ.
"ಕೋವಿಡ್ -19 ನಿರ್ವಹಣೆಗೆ ಎಂದು ವಿಧಿಸಿದ್ದ ನಿರ್ಬಂಧಗಳು ಜನರನ್ನು ಬಹಳಷ್ಟು ಸಂಕಷ್ಟಕ್ಕೆ ಸಿಲುಕಿಸಿದ್ದವು. ಆದರೆ, ಬಕ್ರೀದ್ ಸಂದರ್ಭದಲ್ಲಿ ವ್ಯಾಪಾರಿಗಳಿಗೆ ಮತ್ತು ಜನರಿಗೆ ಕೊಂಚ ತಮ್ಮ ಕಷ್ಟ ಮರೆಯಲು ಸಹಾಯವಾಗಬಹುದು ಎಂಬ ಉದ್ದೇಶದಿಂದ ನಿಯಮಗಳನ್ನು ಸಡಿಲಗೊಳಿಸಿದ್ದೇವೆ" ಎಂದು ಕೇರಳ ಸರ್ಕಾರ ಉತ್ತರಿಸಿದೆ.
ಅಷ್ಟೇ ಅಲ್ಲದೆ ವ್ಯಾಪಾರಿಗಳ ಸಂಘಟನೆಯು ಕಠಿಣ ನಿರ್ಬಂಧಗಳ ವಿರುದ್ಧ ಆಂದೋಲನ ಮಾಡಲು ಪ್ರಾರಂಭಿಸಿದವು. ನಿಯಮಗಳನ್ನು ವಿರೋಧಿಸಿ ಅಂಗಡಿಗಳನ್ನು ತೆರೆಯುವುದಾಗಿ ಘೋಷಿಸಿದವು. ಈ ಹಿನ್ನೆಲೆ ಮೂರು ದಿನಗಳವರೆಗೆ ಲಾಕ್ಡೌನ್ನಲ್ಲಿ ನಿಯಮಗಳನ್ನು ಸಡಿಲ ಮಾಡಿದ್ದೇವೆ ಎಂದು ವಿವರಿಸಿದೆ.