ನವದೆಹಲಿ: ಉತ್ತರ ಪ್ರದೇಶದ ನೋಯ್ಡಾದಲ್ಲಿ ರಿಯಲ್ ಎಸ್ಟೇಟ್ ಕಂಪನಿ ಸೂಪರ್‌ಟೆಕ್(Supertech) ನಿರ್ಮಿಸಿದ 40 ಅಂತಸ್ತಿನ ಎರಡು ಕಟ್ಟಡಗಳನ್ನು ನೋಯ್ಡಾ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಮೂರು ತಿಂಗಳೊಳಗೆ ಕೆಡವಲು ಸುಪ್ರೀಂಕೋರ್ಟ್ ಆದೇಶ ನೀಡಿದೆ.
Supertech ಕಂಪನಿಯ 40 ಅಂತಸ್ತಿನ ಅವಳಿ ಕಟ್ಟಡಗಳ ನೆಲಸಮಕ್ಕೆ ಸುಪ್ರೀಂ ಆದೇಶ - ನೋಯ್ಡಾ ಪ್ರಾಧಿಕಾರದ ಅಧಿಕಾರಿಗಳು
ನೋಯ್ಡಾದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ 40 ಅಂತಸ್ತಿನ ಎರಡು ಕಟ್ಟಡಗಳನ್ನು ನೆಲಸಮ ಮಾಡಲು ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಫ್ಲ್ಯಾಟ್‌ಗಳನ್ನು ಖರೀದಿಸಿದ್ದವರಿಗೆ ಶೇ.12ರಷ್ಟು ಬಡ್ಡಿಯೊಂದಿಗೆ ಹಣ ಮರುಪಾವತಿ ಮಾಡಬೇಕೆಂದು ಸೂಪರ್‌ಟೆಕ್(Supertech) ಕಂಪನಿಗೆ ಸೂಚಿಸಿದೆ.
ನೋಯ್ಡಾ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸೂಪರ್‌ಟೆಕ್ ನಡುವಿನ ಒಪ್ಪಂದದ ಮೇರೆಗೆ ವಸತಿ ಯೋಜನೆಯ ಭಾಗವಾಗಿ ಈ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಆದರೆ 1,000 ಫ್ಲ್ಯಾಟ್‌ಗಳನ್ನು ಹೊಂದಿರುವ ಈ ಅವಳಿ ಕಟ್ಟಡಗಳನ್ನು ನಗರ ಪ್ರದೇಶದಲ್ಲಿ ನಿಯಮಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ಕಟ್ಟಲಾಗಿತ್ತು. ಹೀಗಾಗಿ ಇದನ್ನು ಕೆಡವಲು ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಇಂದು ಎತ್ತಿಹಿಡಿದಿದೆ.
ಈ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ಎಂಆರ್ ಷಾ ಅವರ ದ್ವಿಸದಸ್ಯ ಪೀಠವು ಟವರ್‌ಗಳ ಅಕ್ರಮ ನಿರ್ಮಾಣವನ್ನು ಖಂಡಿಸಿದ್ದು, ಎಲ್ಲಾ ಫ್ಲ್ಯಾಟ್‌ಗಳ ಮಾಲೀಕರಿಗೆ ಶೇ.12ರಷ್ಟು ಬಡ್ಡಿಯೊಂದಿಗೆ ಹಣ ಮರುಪಾವತಿ ಮಾಡಬೇಕು ಎಂದು ಸೂಪರ್‌ಟೆಕ್ ಎಮರಾಲ್ಡ್ ಕಂಪನಿಗೆ ನ್ಯಾಯಾಲಯ ಆದೇಶ ನೀಡಿದೆ. ಅಲ್ಲದೇ ಕಟ್ಟಡ ನೆಲಸಮ ಮಾಡುವ ವೆಚ್ಚವನ್ನೂ ಸಹ ಕಂಪನಿಯೇ ಭರಿಸಬೇಕಿದೆ ಎಂದು ಮಹತ್ವದ ತೀರ್ಪು ನೀಡಿದೆ.
TAGGED:
ಸೂಪರ್‌ಟೆಕ್ ಕಂಪನಿ