ಡೆಹ್ರಾಡೂನ್:ಜಗತ್ತಿಗೇ ಬೆಳಕು ನೀಡುವ ಸೂರ್ಯನಲ್ಲಿ ಅಪರೂಪದ ವಿದ್ಯಮಾನ ನಡೆದಿದೆ. ಸೂರ್ಯನ ಸುತ್ತಲೂ ಕಾಮನಬಿಲ್ಲಿನ ಮಾದರಿಯ ವೃತ್ತ ಕಂಡುಬಂದಿದೆ. ಸೂರ್ಯನ ಸುತ್ತ ಈ ರೀತಿಯ ಪ್ರತಿಫಲನ ಉಂಟಾಗುವುದು ವಿರಳಾತಿವಿರಳ.
ಜಮ್ಮು ಕಾಶ್ಮೀರದ ಲಡಾಖ್ನಲ್ಲಿ ಭಾನುವಾರ ಮಧ್ಯಾಹ್ನ ಇದು ಗೋಚರವಾಗಿದೆ. ಸೂರ್ಯನ ಪ್ರಭಾವಲಯ 22 ಡಿಗ್ರಿ ತ್ರಿಜ್ಯದಲ್ಲಿ ಬೆಳಕು ಮೂಡಿದೆ. ಇದು ಸುತ್ತಲೂ ಕಾಮನಬಿಲ್ಲಿನ ಮಾದರಿಯ ವೃತ್ತ ಸೃಷ್ಟಿಸಿದೆ.