ಔರಂಗಾಬಾದ್: ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡ ಯುವಕರಿಬ್ಬರು ಸಣ್ಣ ಪ್ರಮಾಣದಲ್ಲಿ ಮಾಂಸ ಮಾರಾಟದ ಬಿಸಿನೆಸ್ ಆರಂಭಿಸಿ, ಈಗ ಆ ಕಂಪನಿಯನ್ನು 10 ಕೋಟಿ ರೂಪಾಯಿಗಳಿಗೆ ಮಾರಿದ ಯಶೋಗಾಥೆ ಇಲ್ಲಿದೆ.
2020ರ ಮಧ್ಯಭಾಗದಲ್ಲಿ ಅಪ್ಪಳಿಸಿದ ಕೊರೊನಾ ಅಲೆಯ ಲಾಕ್ಡೌನ್ನಿಂದ ಆಕಾಶ್ ಮಾಸ್ಕೆ ಮತ್ತು ಆದಿತ್ಯ ಕೀರ್ತನೆ ಎಂಬಿಬ್ಬರ ಜೀವನದಲ್ಲಿ ದುರಂತದ ಸರಮಾಲೆ ಘಟಿಸಿದ್ದವು. ಬಾಲ್ಯದ ಗೆಳೆಯರಾಗಿದ್ದ ಈ ಇಬ್ಬರೂ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಹೋಗುವ ಸಿದ್ಧತೆಯಲ್ಲಿದ್ದರು. ಆದರೆ, ಲಾಕ್ಡೌನ್ ಆಗಿದ್ದರಿಂದ ಮೊದಲ ಒಂದು ತಿಗಳು ಸಿನಿಮಾ ನೋಡುತ್ತ ಮನೆಯಲ್ಲೇ ಕಾಲಹರಣ ಮಾಡಿದ್ದರು. ಲಾಕ್ಡೌನ್ ದೀರ್ಘಾವಧಿಗೆ ಮುಂದುವರೆದಿದ್ದರಿಂದ ಇವರನ್ನು ಕಂಪನಿ ಕೆಲಸದಿಂದ ವಜಾ ಮಾಡಿತ್ತು.
ಔರಂಗಾಬಾದ್ ಸುತ್ತಮುತ್ತ ಉದ್ಯಮ ವಹಿವಾಟುಗಳು ಚೆನ್ನಾಗಿ ನಡೆಯುತ್ತಿರುವುದರ ಪರಿಚಯವಿದ್ದ ಇಬ್ಬರೂ ತಮ್ಮದೇ ಆದ ಬಿಸಿನೆಸ್ ಆರಂಭಿಸಲು ತೀರ್ಮಾನಿಸಿದರು. ಹೊಸ ಬಿಸಿನೆಸ್ ಆರಂಭಿಸುವ ಬಗ್ಗೆ ಹಲವಾರು ಪುಸ್ತಕಗಳನ್ನು ಓದಿಕೊಂಡ ಇಬ್ಬರೂ ಸಾಕಷ್ಟು ಉತ್ಸಾಹಭರಿತರಾಗಿದ್ದರು. ಇಷ್ಟಾದರೂ ನಿಖರವಾಗಿ ಏನು ಆರಂಭಿಸಬೇಕೆಂಬುದು ಮಾತ್ರ ತಿಳಿದಿರಲಿಲ್ಲ.