ಚೆನ್ನೈ: ಇಲ್ಲಿನ ತಿರುವೊಟ್ಟಿಯೂರಿನಲ್ಲಿ 1993 ರಲ್ಲಿ ನಿರ್ಮಿಸಲಾದ ಅರಿವಕ್ಕುಳಂ ಸ್ಲಂ ಕ್ಲಿಯರೆನ್ಸ್ ಬೋರ್ಡ್ ರೆಸಿಡೆನ್ಸ್‌ನ ಡಿ ಬ್ಲಾಕ್ ಕಟ್ಟಡದಲ್ಲಿ ಈ ಹಿಂದೆ ಬಿರುಕು ಉಂಟಾಗಿತ್ತು. 24 ಮನೆಗಳಿದ್ದ ಈ ನಾಲ್ಕು ಅಂತಸ್ತಿನ ಕಟ್ಟಡ ಇಂದು ಬೆಳಗ್ಗೆ ಕುಸಿದು ಬಿದ್ದಿದೆ.
ಇದನ್ನೂ ಓದಿ:ಕ್ರಿಸ್ಮಸ್‌ಗೂ ಮುನ್ನ ದಿನ ಕೇರಳದಲ್ಲಿ ಎಣ್ಣೆ ಕಿಕ್ ; ಡಿ.24 ರಂದು ದಾಖಲೆಯ ₹65 ಕೋಟಿ ಮೌಲ್ಯದ ಮದ್ಯ ಮಾರಾಟ
ಕಟ್ಟಡದಲ್ಲಿದ್ದ ಎಲ್ಲರನ್ನೂ ಈ ಮೊದಲೇ ಸ್ಥಳಾಂತರಿಸಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತಾದರೂ, ಅವರ ವಸ್ತುಗಳು ಸಂಪೂರ್ಣ ಹಾನಿಗೀಡಾಗಿವೆ.
ಕುಸಿದ ನಾಲ್ಕು ಅಂತಸ್ತಿನ ಕಟ್ಟಡ ಮುಖ್ಯಮಂತ್ರಿ ಸ್ಟಾಲಿನ್ ಅವರು ನಿರಾಶ್ರಿತರನ್ನು ತಕ್ಷಣ ಸ್ಥಳಾಂತರಿಸಲು ಮತ್ತು 24 ಕುಟುಂಬಗಳಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಘಟನೆ ಸಂಬಂಧ ನಗರ ವಸತಿ ಅಭಿವೃದ್ಧಿ ಸಚಿವ ತಾ. ಮೊ.ಅನ್ಬರಸನ್ ಪರಿಶೀಲನೆ ನಡೆಸಿದ್ದಾರೆ.