ಕರ್ನಾಟಕ

karnataka

ETV Bharat / bharat

ಹೈದರಾಬಾದ್‌ನಲ್ಲಿ ಮೈ ನಡುಗುವ ಚಳಿ: ಸಿರ್ಪುರದಲ್ಲಿ 4.7 ಡಿಗ್ರಿ ತಾಪಮಾನ ದಾಖಲು! - ತೆಲಂಗಾಣ ರಾಜ್ಯದ​ ಹವಾಮಾನದಲ್ಲಿ ಭಾರಿ​ ಬದಲಾವಣೆ

ತೆಲಂಗಾಣ ರಾಜ್ಯದ​ ಹವಾಮಾನದಲ್ಲಿ ಭಾರಿ​ ಬದಲಾವಣೆ ಕಂಡುಬಂದಿದೆ. ಕುಮುರಂ ಭೀಮ್ ಜಿಲ್ಲೆಯ ಸಿರ್ಪುರದಲ್ಲಿ 4.7 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದೆ. ಸೋಮವಾರ ಮತ್ತು ಮಂಗಳವಾರ ಮಧ್ಯಾಹ್ನ ಒಣ ಹವೆ ಇರಲಿದ್ದು, ರಾತ್ರಿ ಭಾರಿ ಚಳಿ ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

temperature
ಅಲ್ಲೂರಿ ಸೀತಾರಾಮರಾಜ್ ಜಿಲ್ಲೆ

By

Published : Jan 9, 2023, 12:33 PM IST

ಹೈದರಾಬಾದ್​: ಒಂದು ಸ್ವೆಟರ್ ಅಥವಾ ಲಘು ಜಾಕೆಟ್ ಇದ್ದರೆ ಸಾಕು ಹೈದರಾಬಾದ್​ನಲ್ಲಿ ಚಳಿ ದಿನಗಳನ್ನು ಕಳೆಯಬಹುದು ಎಂದು ಕೆಲವರು ಮಾತನಾಡುತ್ತಾರೆ. ಆದ್ರೆ, ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಚಳಿ ತುಸು ಹೆಚ್ಚಾಗಿದ್ದು, ಇಂದು ಮುಂಜಾನೆ ತೆಲಂಗಾಣ ರಾಜ್ಯದ ವಿವಿಧ ಭಾಗಗಳಲ್ಲಿ ಮಂಜು ಮುಸುಕಿದ ವಾತಾವರಣವಿತ್ತು. ಒಂದೇ ದಿನದಲ್ಲಿ ಹವಾಮಾನದಲ್ಲಿ ಭಾರಿ​ ಬದಲಾವಣೆ ಕಂಡು ಬಂದಿದ್ದು, ತಂಪು ವಾತಾವರಣ ಜನರ ಮೈ ನಡುಗಿಸಿದೆ.

ಈಶಾನ್ಯ ಭಾರತದಿಂದ ಕಡಿಮೆ ಒತ್ತಡದ ಗಾಳಿ ಬೀಸುತ್ತಿರುವ ಕಾರಣ ತೆಲಂಗಾಣದಲ್ಲಿ ತಂಪಾದ ವಾತಾವರಣ ಉಂಟಾಗಿದೆ. ಚಳಿ ತೀವ್ರಗೊಂಡಿರುವ ಕಾರಣಕ್ಕೆ ಜನರು ಬಿಸಿ ಬಿಸಿ ಪಾನೀಯದ ಮೊರೆ ಹೋಗುತ್ತಿದ್ದಾರೆ. ಸೋಮವಾರ ಮತ್ತು ಮಂಗಳವಾರ ಮಧ್ಯಾಹ್ನ ಒಣ ಹವೆ ಇರಲಿದ್ದು, ರಾತ್ರಿ ಚಳಿ ಇರುತ್ತದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.

ರಾತ್ರಿ ವೇಳೆ ತಾಪಮಾನವು ಸಾಮಾನ್ಯಕ್ಕಿಂತ 5 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಕಡಿಮೆ ಇರುತ್ತದೆ. ಮೂರು ದಿನಗಳ ಹಿಂದೆ ಸಾಮಾನ್ಯಕ್ಕಿಂತ ಐದಾರು ಡಿಗ್ರಿ ಹೆಚ್ಚಾಗಿದ್ದ ತಾಪಮಾನ, ಈಗ ನಾಲ್ಕೈದು ಡಿಗ್ರಿ ಕಡಿಮೆಯಾಗಿದೆ. ಎರಡ್ಮೂರು ದಿನದಲ್ಲಿ ಅನಿರೀಕ್ಷಿತವಾಗಿ ವಾತಾವರಣ ಬದಲಾಗಿದ್ದು, ಚಳಿ ಹೆಚ್ಚಾಗುತ್ತಿರುವುದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಆಂಧ್ರಪ್ರದೇಶದಲ್ಲೂ ಭಾರಿ ಚಳಿ: ಭಾನುವಾರದ ಮುಂಜಾನೆ ಕುಮುರಂ ಭೀಮ್ ಜಿಲ್ಲೆಯ ಸಿರ್ಪುರ್ (ಯು) ನಲ್ಲಿ 4.7 ಡಿಗ್ರಿ ಮತ್ತು ಹೈದರಾಬಾದ್ ನಗರದ ಪಶ್ಚಿಮ ಮಾರೆಡಪಲ್ಲಿಯಲ್ಲಿ 10.5 ಡಿಗ್ರಿಗಳಷ್ಟು ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಇದು ರಾಜ್ಯದಲ್ಲಿ ದಾಖಲಾದ ಅತ್ಯಂತ ಕಡಿಮೆ ತಾಪಮಾನವಾಗಿದೆ. ಹೈದರಾಬಾದ್ ನಗರದಲ್ಲಿ ಸೋಮವಾರ ಬೆಳಗ್ಗೆ ಕನಿಷ್ಠ ತಾಪಮಾನ 13 ಡಿಗ್ರಿ ದಾಖಲಾಗಿತ್ತು. ಪಕ್ಕದ ಆಂಧ್ರಪ್ರದೇಶದಲ್ಲಿ ಸಹ ಚಳಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ಅಲ್ಲೂರಿ ಸೀತಾರಾಮರಾಜ್ ಜಿಲ್ಲೆಯ ಚಿಂತಪಲ್ಲಿಯಲ್ಲಿ ಕನಿಷ್ಠ 1.5 ಡಿಗ್ರಿ ಉಷ್ಣಾಂಶ ದಾಖಲಾಗಿದೆ.

ಇದನ್ನೂ ಓದಿ:ಉತ್ತರ ಭಾರತದಲ್ಲಿ ದಾಖಲೆಯ ಚಳಿ, ದಟ್ಟ ಮಂಜಿಗೆ ಜನಜೀವನ ಅಸ್ತವ್ಯಸ್ತ

ರಾಷ್ಟ್ರ ರಾಜಧಾನಿ ದೆಹಲಿ ದಾಖಲೆ ಮಟ್ಟದ ಚಳಿ ಬೀಸುತ್ತಿದೆ. ಪರಿಣಾಮ, ಸರ್ಕಾರವು ಶಾಲೆಗಳ ಚಳಿಗಾಲದ ರಜೆಯನ್ನು ಜನವರಿ 15 ರವರೆಗೆ ವಿಸ್ತರಿಸಿದೆ. ಜೊತೆಗೆ ಭಾರತೀಯ ಹವಾಮಾನ ಇಲಾಖೆಯು ಸೋಮವಾರ ದೆಹಲಿ ಮತ್ತು ಉತ್ತರ ಭಾರತದ ಇತರೆ ಭಾಗಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ದೆಹಲಿ ಮಾತ್ರವಲ್ಲದೇ, ದೇಶದ ಇತರೆ ರಾಜ್ಯಗಳಾದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಪ್ರತ್ಯೇಕ ಭಾಗಗಳು, ಬಿಹಾರ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಉತ್ತರ ಮಧ್ಯಪ್ರದೇಶದಲ್ಲೂ ಚಳಿಯ ತೀವ್ರತೆ ಅಧಿಕವಿದೆ.

ಇದನ್ನೂ ಓದಿ:ರಾಷ್ಟ್ರದ ರಾಜಧಾನಿಯಲ್ಲಿ ದಾಖಲೆಯ ಚಳಿ.. ರಾಜ್ಯ ರಾಜಧಾನಿಯಲ್ಲೂ ಮುಂದುವರಿದ ಮೈಕೊರೆಯುವ ಚಳಿ..

ABOUT THE AUTHOR

...view details