ತಿರುಮಲ(ಆಂಧ್ರ ಪ್ರದೇಶ): ಬ್ಯಾಡ್ಮಿಂಟನ್ ಆಟಗಾರ್ತಿ, ಒಲಿಂಪಿಕ್ಸ್‌ನ ಕಂಚಿನ ಪದಕ ಗೆದ್ದಿರುವ ಪಿವಿ ಸಿಂಧು ಇಂದು ತಿರುಪತಿಯ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ಗುರುವಾರ ರಾತ್ರಿಯೇ ಪದ್ಮಾವತಿ ನಗರದಲ್ಲಿರುವ ಶ್ರೀಕೃಷ್ಣ ಅತಿಥಿ ಗೃಹಕ್ಕೆ ಆಗಮಿಸಿದ್ದು, ದೇವಸ್ಥಾನದ ಅಧಿಕಾರಿಗಳು ಅವರನ್ನು ಸ್ವಾಗತಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಪಿವಿ ಸಿಂಧು ರಿಂದ ತಿರುಪತಿ ತಿಮ್ಮಪ್ಪನ ದರ್ಶನ - ಬ್ಯಾಡ್ಮಿಂಟನ್ ತಾರೆ
ಟೋಕಿಯೋ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತೆ, ತಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಇಂದು ತಿರುಪತಿಗೆ ಭೇಟಿ ನೀಡಿದ್ದಾರೆ, ತಿಮ್ಮಪ್ಪನ ದರ್ಶನ ಪಡೆಯುವುದಕ್ಕಾಗಿ ನಿನ್ನೆ ರಾತ್ರಿಯೇ ಅವರು ತಿರುಮಲಕ್ಕೆ ಆಗಮಿಸಿದ್ದು, ಸಿಂಧುವನ್ನು ದೇವಸ್ಥಾನದ ಆಡಳಿತ ಮಂಡಳಿಯ ಅಧಿಕಾರಿಗಳು ಸ್ವಾಗತಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಪಿವಿ ಸಿಂಧು ರಿಂದ ತಿರುಪತಿ ತಿಮ್ಮಪ್ಪನ ದರ್ಶನ
ಇಂದು ಬೆಳಿಗ್ಗೆ ವಿಐಪಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಪದಕ ಗೆದ್ದಿರುವ ಸಿಂಧು, ವೆಂಕಟೇಶ್ವರನ ಆಶೀರ್ವಾದಕ್ಕಾಗಿ ತಿರುಮಲ ಬೆಟ್ಟಕ್ಕೆ ಬಂದಿದ್ದಾರೆ.