ನವದೆಹಲಿ:ನಗರದಲ್ಲಿ ನಡೆದ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜ್ಮತ್ ಅಲಿ ಖಾನ್ ಎಂಬಾತ ವಿಧವೆಯಾಗಿದ್ದ ಸಿಖ್ ಮಹಿಳೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಆಗದಿದ್ದರೆ ತನ್ನಲ್ಲಿರುವ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸಂತ್ರಸ್ತೆ ಮತಾಂತರಕ್ಕೆ ನಿರಾಕರಿಸಿದ್ದಕ್ಕೆ ಆರೋಪಿ ಆ್ಯಸಿಡ್ ಎರಚಿ ಸಾಯಿಸುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಪೊಲೀಸರು ಅತ್ಯಾಚಾರ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, 2016 ರಲ್ಲಿ ಸಂತ್ರಸ್ತೆಗೆ ಲಕ್ಷ್ಮಿ ನಗರದ ನಿವಾಸಿ ಅಜ್ಮತ್ ಅಲಿ ಖಾನ್ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದು, ಇಬ್ಬರು ಸ್ನೇಹಿತರಾಗಿದ್ದರು. ಸ್ನೇಹವು ಆಳವಾಗಿ ಬೆಳೆದು 2017 ರ ಹೊತ್ತಿಗೆ ಸಂಬಂಧದಲ್ಲಿದ್ದರು. ಇಬ್ಬರು ಅನ್ಯೋನ್ಯವಾಗಿದ್ದ ಸಂದರ್ಭದಲ್ಲಿ ಖಾನ್ ವಿಡಿಯೋ ರೆಕಾರ್ಡ್ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಪದೇ ಪದೆ ಖಾನ್ ನನಗೆ ಮುಸ್ಲಿಂ ಧರ್ಮ ಅಳವಡಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾನೆ. ಅದನ್ನು ನಿರಾಕರಿಸಿದ್ದೆ. ನಾನು ಸಿಖ್ ಹುಡುಗಿ. ಮದುವೆಯ ನಂತರವೂ ಸಿಖ್ ಆಗಿಯೇ ಉಳಿಯಲು ಬಯಸುತ್ತೇನೆ ಎಂದು ಹೇಳಿದ್ದೆ. ಆದರೆ ಅತ ನನ್ನನ್ನು ಒತ್ತಾಯಿಸಿ, ಇಸ್ಲಾಂ ಧರ್ಮವನ್ನು ಸ್ವೀಕರಿಸಬೇಕು, ಬುರ್ಖಾ ಧರಿಸಬೇಕು, ದಿನಕ್ಕೆ ಐದು ಬಾರಿ ನಮಾಜ್ ಮಾಡಬೇಕು ಮತ್ತು ರೋಜಾ ಇಟ್ಟುಕೊಳ್ಳಬೇಕು ಎಂದೆಲ್ಲ ಒತ್ತಡ ಹೇರುತ್ತಿದ್ದ.