ಕರ್ನಾಟಕ

karnataka

ETV Bharat / bharat

ಡ್ರಗ್ಸ್‌ ಪಾರ್ಟಿ: ಜಾಮೀನಿನ ಮೇಲೆ ಹೊರ ಬಂದ ಶಕ್ತಿ ಕಪೂರ್ ಮಗ ಸಿದ್ದಾಂತ್ ಕಪೂರ್ - ಹಿರಿಯ ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಕಪೂರ್ ಜಾಮೀನು ಸುದ್ದಿ

ಮಾದಕ ವಸ್ತು ಸೇವನೆ‌ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟ ಸಿದ್ದಾಂತ್ ಕಪೂರ್​ ಬಂಧಿಸಲಾಗಿತ್ತು. ಇದೀಗ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

shakti kapoor son siddhanth kapoor  siddhanth kapoor bail news  siddhanth kapoor released on bail  Siddhanth Kapoor get bail  ಹಿರಿಯ ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಕಪೂರ್ ಜಾಮೀನು ಮೇಲೆ ಬಿಡುಗಡೆ  ಡ್ರಗ್ಸ್​ ಕೇಸ್​ನಲ್ಲಿ ಹಿರಿಯ ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಕಪೂರ್ ಭಾಗಿ  ಹಿರಿಯ ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಕಪೂರ್ ಜಾಮೀನು ಸುದ್ದಿ  ಹಿರಿಯ ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಕಪೂರ್ ಡ್ರಗ್ಸ್​ ಪ್ರಕರಣ
ಜಾಮೀನಿನ ಮೇಲೆ ಹೊರ ಬಂದ ಶಕ್ತಿ ಕಪೂರ್ ಮಗ ಸಿದ್ದಾಂತ್ ಕಪೂರ್

By

Published : Jun 14, 2022, 8:23 AM IST

Updated : Jun 14, 2022, 8:47 AM IST

ಬೆಂಗಳೂರು:ಮಾದಕ ವಸ್ತು ಪ್ರಕರಣದಲ್ಲಿ ಹಿರಿಯ ನಟ ಶಕ್ತಿ ಕಪೂರ್ ಮಗ ಸಿದ್ದಾಂತ್ ಕಪೂರ್​ಗೆ ಜಾಮೀನು ಸಿಕ್ಕಿದೆ. ಇಲ್ಲಿನ ಹೋಟೆಲ್​ವೊಂದರ ಮೇಲೆ ದಾಳಿ ನಡೆಸಿದ್ದ ಪೊಲೀಸರು ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ್ದ ಸಿದ್ಧಾಂತ್‌ ಸೇರಿದಂತೆ ಐವರನ್ನು ಬಂಧಿಸಿದ್ದರು. ಆರೋಪಿಗಳ ಡ್ರಗ್ಸ್ ಪರೀಕ್ಷೆ ಪಾಸಿಟಿವ್ ಬಂದಿತ್ತು. ಈ ಪ್ರಕರಣದಲ್ಲಿ ಈಗ ಐವರಿಗೂ ಜಾಮೀನು ನೀಡಲಾಗಿದೆ.

ಈ ಪ್ರಕರಣದಲ್ಲಿ ಸಿದ್ದಾಂತ್ ಕಪೂರ್ ಹಾಗೂ ನಾಲ್ವರನ್ನು ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಬೆಂಗಳೂರು ಪೂರ್ವ ಡಿಸಿಪಿ ಭೀಮಾಶಂಕರ್ ಗುಳೇದ್ ಸ್ಪಷ್ಟಪಡಿಸಿದ್ದಾರೆ. ಕರೆದಾಗ ಠಾಣೆಗೆ ಬರಬೇಕಾಗುತ್ತದೆ ಎಂದು ಷರತ್ತು ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಏನಿದು ಪ್ರಕರಣ?:ಭಾನುವಾರ ರಾತ್ರಿ ಎಂಜಿ ರಸ್ತೆಯಲ್ಲಿರುವ ಐಷಾರಾಮಿ ಹೋಟೆಲ್​​​ನಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು. ಈ ವೇಳೆ ದಾಳಿ ನಡೆಸಿದ ಬೆಂಗಳೂರು ಪೊಲೀಸರು ಸಿದ್ದಾಂತ್ ಕಪೂರ್ ಸೇರಿ ನಾಲ್ವರನ್ನು ಬಂಧಿಸಿದ್ದರು. ದಾಳಿ ವೇಳೆ ಸುಮಾರು 35 ಮಂದಿ ರೇವ್​ ಪಾರ್ಟಿಯಲ್ಲಿ ಸಿಕ್ಕಿ ಬಿದ್ದಿದ್ದರು. ಈ ವೇಳೆ ನಡೆಸಿದ ಪರೀಕ್ಷೆಯಲ್ಲಿ ಐವರು ಡ್ರಗ್ಸ್​ ಸೇವಿಸಿರುವುದು ಸಾಬೀತಾಗಿತ್ತು.

ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ ಸೆಕ್ಷನ್ 22ಎ, 22ಬಿ ಮತ್ತು 27ಬಿ ಅಡಿ ಪ್ರಕರಣ ದಾಖಲಿಸಲಾಗಿತ್ತು.

Last Updated : Jun 14, 2022, 8:47 AM IST

ABOUT THE AUTHOR

...view details