ಕುಲ್ಲು, ಹಿಮಾಚಲ ಪ್ರದೇಶ: ಹೊಟ್ಟೆ ನೋವಿನಿಂದ ನರಳುತ್ತಿದ್ದ ಮಹಿಳೆಯನ್ನು ಬೆನ್ನ ಮೇಲೆ ಹೊತ್ತು ವ್ಯಕ್ತಿಯೊಬ್ಬ ಆಸ್ಪತ್ರೆಗೆ ಸಾಗಿಸಿದ ಘಟನೆ ಕುಲ್ಲು ಬಳಿಯ ಮರೋಡ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಡೋಲಾ ಸಿಂಗ್ ಪತ್ನಿ ಲೀಲಾದೇವಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಮನೆಯಲ್ಲಿಯೇ ಉಪಚಾರ ಮಾಡಿದರೂ ಹೊಟ್ಟೆ ನೋವು ನಿವಾರಣೆಯಾಗದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿತ್ತು.
ಇದನ್ನೂ ಓದಿ:ಕೋವಿಡ್ ಕುರಿತ ಸಾರ್ಕ್ ಸಭೆಗೆ ಭಾರತದಿಂದ ಪಾಕ್ಗೆ ಆಹ್ವಾನ
ಆಸ್ಪತ್ರೆಗಳು ಹತ್ತಿರವಿಲ್ಲದ ಕಾರಣ ಮತ್ತು ಸರಿಯಾದ ರಸ್ತೆಯಿಲ್ಲದ ಕಾರಣದಿಂದ ಮಹಿಳೆಯನ್ನು 25 ಕಿಲೋಮೀಟರ್ ದೂರದವರೆಗೆ ಬೆನ್ನ ಮೇಲೆ ಹೊತ್ತು ಸಾಗಿಸಲಾಯಿತು. ಇದಾದ ನಂತರ 13 ಕಿಲೋಮೀಟರ್ ದೂರದವರೆಗೆ ಒಂದು ವಾಹನದ ಮೂಲಕ ಕ್ಲಿನಿಕ್ಗೆ ಸಾಗಿಸಲಾಯಿತು.
ಮಹಿಳೆಯನ್ನು ಬೆನ್ನ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿಸುವ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಜೊತೆಗೆ ಗ್ರಾಮಕ್ಕೆ ರಸ್ತೆ ಸೇರಿ ಮೂಲಸೌಕರ್ಯ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.