ನವದೆಹಲಿ: ಕೋವಿಡ್ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಂಡಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಆರೋಪಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಟ್ವೀಟ್ಗೆ ಚಿದಂಬರಂ ರಿಟ್ವೀಟ್ ಮಾಡಿದ್ದಾರೆ. ಆದರೆ ಪ್ರಸ್ತುತ ಆರೋಗ್ಯ ಸಚಿವರ ಟ್ವೀಟ್ ಡಿಲೀಟ್ ಆಗಿದೆ. " ಮೇ ದಿನ! ಮೇ ದಿನ! 130 ಕೋಟಿ ಜನರನ್ನು ಹೊತ್ತ ಹಡಗು 2021ರಲ್ಲಿ ಮುಳುಗುತ್ತಿದೆ. ನಮ್ಮನ್ನು ರಕ್ಷಿಸಿ, ಕನಿಷ್ಠಪಕ್ಷ ನನ್ನನ್ನಾದರೂ ಉಳಿಸಿ" ಎಂದು ಬರೆದುಕೊಂಡಿದ್ದಾರೆ.