ಮುಂಬೈ:ಬಾಲಿವುಡ್ ಕಿಂಗ್ ಶಾರೂಖ್ ಖಾನ್ ಅವರು ಲತಾ ಮಂಗೇಶ್ವರ್ ಅವರ ಪಾರ್ಥಿವ ಶರೀರದ ಮುಂದೆ ಪ್ರಾರ್ಥನೆ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವಿವಾದಕ್ಕೀಡಾಗಿತ್ತು. ಲತಾ ಜಿ ಅವರ ಪಾರ್ಥಿವ ಶರೀರದ ಮೇಲೆ ಶಾರೂಖ್ ಖಾನ್ ಉಗಿದಿದ್ದಾರೆ ಎಂದೆಲ್ಲಾ ಟ್ರೋಲ್ ಮಾಡಿ ವಿವಾದ ಹುಟ್ಟು ಹಾಕಲಾಗಿತ್ತು.
ಈ ಬಗ್ಗೆ ನಟಿ ಊರ್ಮಿಳಾ ಮಾತೋಡ್ಕರ್, ಕಾಂಗ್ರೆಸ್ ನಾಯಕ ಸಂಜಯ್ ರಾವತ್ ಸ್ಪಷ್ಟನೆ ನೀಡಿದ್ದು, ಇದು ಉಗಿಯುವುದಲ್ಲ ಇಸ್ಲಾಂ ಧರ್ಮದಲ್ಲಿ ಇದನ್ನು ದುವಾ ಕೇಳಿದ ಬಳಿಕ ಗಾಳಿಯಲ್ಲಿ 'ಊದಿ ಪ್ರಾರ್ಥಿಸುವುದು' ಎಂದರ್ಥ ಎಂದಿದ್ದಾರೆ.
ಶಾರೂಖ್ ಖಾನ್ ಅವರು ಪ್ರಾರ್ಥಿಸಿದ ಬಗ್ಗೆ ಟ್ವೀಟ್ ಮಾಡಿರುವ ಊರ್ಮಿಳಾ ಮಾತೋಡ್ಕರ್ 'ಶಾರೂಖ್ ಅವರು ಲತಾ ಜಿ ಅವರ ಪಾರ್ಥಿವ ಶರೀರದ ಮೇಲೆ ಉಗಿದಿಲ್ಲ. ಇದನ್ನು ಇಸ್ಲಾಂ ಧರ್ಮದಲ್ಲಿ ಪ್ರಾರ್ಥನೆ ಎಂದು ಕರೆಯುತ್ತಾರೆ. ಇದು ಭಾರತದ ಸಂಸ್ಕೃತಿ. ಈಶ್ವರ್ ಅಲ್ಲಾ ತೇರೆ ನಾಮ್, ಸಬ್ಕೋ ಸನ್ಮತಿ ದೇ ಭಗವಾನ್, ಸಾರಾ ಜಗ್ ತೇರಾ ಸಂತಾನ್ ಎಂದು ಬರೆದುಕೊಂಡಿದ್ದಾರೆ.
ಇನ್ನು ಬಾಲಿವುಡ್ ನಿರ್ದೇಶಕ, ನಿರ್ಮಾಪಕರಾದ ಅಶೋಕೆ ಪಂಡಿತ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಶಾರೂಖ್ ಖಾನ್ ಅವರು, ಲತಾ ಮಂಗೇಶ್ಕರ್ ಅವರ ಮುಂದಿನ ಪಯಣಕ್ಕಾಗಿ ಪ್ರಾರ್ಥಿಸಿದರು. ಇದನ್ನೇ ಕೆಲ ಕೋಮುವಾದಿಗಳು ಪಾರ್ಥಿವ ಶರೀರದ ಮೇಲೆ ಶಾರೂಖ್ ಉಗುಳಿದರು ಎಂದು ವದಂತಿ ಹಬ್ಬಿಸಿದರು. ಅಂತವರಿಗೆಲ್ಲಾ ನಾಚಿಕೆಯಾಗಬೇಕು. ಇಂತಹ ಕೊಳಲು ಮನಸ್ಥಿತಿಯ ಜನರಿಗೆ ದೇಶದಲ್ಲಿ ಜಾಗ ಕೊಡಬಾರದು ಎಂದು ಕಿಡಿಕಾರಿದ್ದಾರೆ.