ಕರ್ನಾಟಕ

karnataka

ETV Bharat / bharat

'ದಿ ಕಪಿಲ್ ಶರ್ಮಾ ಶೋ', ಸಲ್ಮಾನ್‌ ಖಾನ್ ನಡೆಸಿಕೊಡುವ 'ಬಿಗ್ ಬಾಸ್‌' ಶೋದಿಂದ ಸೀಮಾ ಹೈದರ್‌ಗೆ ಆಫರ್​! - ಸೀಮಾ ಹೈದರ್​ ಜನಪ್ರಿಯತೆ

ಪ್ರೀತಿಗಾಗಿ ಗಡಿ ದಾಟಿ ಬಂದ ಸೀಮಾ ಹೈದರ್​ಗೆ ಹಿಂದಿಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಮತ್ತು 'ದಿ ಕಪಿಲ್ ಶರ್ಮಾ' ಕಾಮಿಡಿ ಶೋ ಆಯೋಜಕರಿಂದ ಕರೆ ಬಂದಿದೆಯಂತೆ. ಅದನ್ನು ವಿಡಿಯೋ ಮಾಡಿ ಅವರೇ ಹೇಳಿಕೊಂಡಿದ್ದಾರೆ.

ಸೀಮಾ ಹೈದರ್​
ಸೀಮಾ ಹೈದರ್​

By ETV Bharat Karnataka Team

Published : Sep 1, 2023, 6:49 PM IST

ಹೈದರಾಬಾದ್:ಪಬ್ಜಿ ಗೇಮ್ ಮೂಲಕ ಪರಿಚಿತನಾದ ಪ್ರಿಯತಮನಿಗಾಗಿ ತನ್ನ ನಾಲ್ಕು ಮಕ್ಕಳೊಂದಿಗೆ ನೆರೆಯ ರಾಷ್ಟ್ರ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತಕ್ಕೆ ಆಗಮಿಸಿದ ಬಳಿಕ ಸೆಲೆಬ್ರಿಟಿಯಾಗಿ ಮಿಂಚುತ್ತಿರುವ ಸೀಮಾ ಹೈದರ್​ಗೆ ಬಾಲಿವುಡ್​ನಿಂದ ಸ್ಪೆಷಲ್‌ ಆಫರ್​ಗಳು ಬರುತ್ತಿವೆ ಎಂದು ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಇದೀಗ ಹಿಂದಿಯ ಜನಪ್ರಿಯ ರಿಯಾಲಿಟಿ ಟಿವಿ ಶೋಗಳಿಂದಲೂ ಆಫರ್‌ಗಳು ಬರುತ್ತಿವೆಯಂತೆ. ಸ್ವತಃ ಅವರೇ ವಿಡಿಯೋ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

''ನಟ ಸಲ್ಮಾನ್ ಖಾನ್ ನಡೆಸಿಕೊಡುವ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತು ವಿಶ್ವದ ನಂಬರ್ ಒನ್ ಕಾಮಿಡಿ ಶೋ ದಿ ಕಪಿಲ್ ಶರ್ಮಾ ಶೋದಲ್ಲಿ ಭಾಗಿಯಾಗುವಂತೆ ನನಗೆ ಆಫರ್‌ಗಳು ಬಂದಿವೆ'' ಎಂದು ಸೀಮಾ ಹೈದರ್ ಹೇಳಿಕೊಂಡಿದ್ದಾರೆ.

"ಹಲೋ, ರಾಮ್-ರಾಮ್, ನಾನು ಸಚಿನ್ ಅವರ ಪತ್ನಿ ಸೀಮಾ. ನಮಗೆ ಬಿಗ್ ಬಾಸ್ ಮತ್ತು ಕಪಿಲ್ ಶರ್ಮಾ ಅವರಿಂದ ಆಫರ್‌ಗಳು ಬಂದಿವೆ. ಆದರೆ, ಅಲ್ಲಿಗೆ ಹೋಗುವ ಯಾವುದೇ ಯೋಚನೆ ಮಾಡಿಲ್ಲ. ಭವಿಷ್ಯದಲ್ಲಿ ಅಂತಹದ್ದೇನಾದರೂ ಭಾಗಿಯಾಗುವ ಘಳಿಗೆ ಕೂಡಿಬಂದರೆ ನಿಮಗೆ ಖಂಡಿತಾ ತಿಳಿಸುತ್ತೇನೆ. ಧನ್ಯವಾದಗಳು, ಜೈ ಹಿಂದ್, ಹಿಂದೂಸ್ತಾನ್ ಜಿಂದಾಬಾದ್" ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಸಂಜಿವ್​ ಶರ್ಮಾ ಎಂಬ ನೆಟ್ಟಿಗ ಈ ವಿಡಿಯೋವನ್ನು ಟ್ವೀಟ್​ ಮಾಡಿಕೊಂಡಿದ್ದಾರೆ. ಆದರೆ, 'ಬಿಗ್ ಬಾಸ್' ಮತ್ತು 'ದಿ ಕಪಿಲ್ ಶರ್ಮಾ' ಕಾರ್ಯಕ್ರಮದ ಆಯೋಜಕರಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಉತ್ತರ ಪ್ರದೇಶದ ವ್ಯಕ್ತಿ ಸಚಿನ್ ಮೀನಾ ಅವರನ್ನು ಹುಡುಕಿಕೊಂಡು ಪಾಕಿಸ್ತಾನದಿಂದ ನೇಪಾಳದ ಮೂಲಕ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಅವರ ಪ್ರೇಮಕಥೆಯೇ ಸಿನಿಮಾ ಆಗುತ್ತಿದೆ. ಚಿತ್ರಕ್ಕೆ 'ಕರಾಚಿ ಟು ನೋಯ್ಡಾ' ಎಂದು ಹೆಸರಿಟ್ಟಿದ್ದು ಇತ್ತೀಚೆಗೆ ಚಿತ್ರದ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಯಿತು. ಸೀಮಾ ಹೈದರ್ ಪಾತ್ರಕ್ಕೆ ನಟಿ ಆಯ್ಕೆ ಮಾಡಲಾಗಿದ್ದು, ಸಚಿನ್ ಪಾತ್ರಕ್ಕಾಗಿ ಆಡಿಷನ್ ನಡೆಯುತ್ತಿದೆ. 'ಜಾನಿ ಫೈರ್‌ಫಾಕ್ಸ್ ಪ್ರೊಡಕ್ಷನ್ ಹೌಸ್' ಎಂಬ ನಿರ್ಮಾಣ ಸಂಸ್ಥೆ 'ಕರಾಚಿ ಟು ನೋಯ್ಡಾ' ಚಿತ್ರಕ್ಕೆ ಆರ್ಥಿಕ ಇಂಧನ ತುಂಬುವ ಜವಾಬ್ದಾರಿ ಹೊತ್ತುಕೊಂಡಿದೆ. ನಿರ್ಮಾಪಕ ಹಾಗೂ ನಿರ್ದೇಶಕ ಅಮಿತ್ ಜಾನಿ ಈ ಹಿಂದೆಯೇ ಈ ಬಗ್ಗೆ ಘೋಷಿಸಿದ್ದರು. ಈಗಾಗಲೇ ಚಿತ್ರದ ಒಂದು ಹಾಡು ಕೂಡ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದೆ. ಅಂದುಕೊಂಡಂತೆ ಆದರೆ 'ಕರಾಚಿ ಟು ನೋಯ್ಡಾ' ಚಿತ್ರವು ಬರುವ ಅಕ್ಟೋಬರ್‌ನಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ:'ಕನ್ನಡದ ಅತ್ಯುತ್ತಮ ಪ್ರೇಮಕಾವ್ಯಗಳಲ್ಲೊಂದು': ಸಪ್ತಸಾಗರದಾಚೆ ಎಲ್ಲೋ ಸಿನಿಮಾಗೆ ರಿಷಬ್​ ಶೆಟ್ಟಿ ಮೆಚ್ಚುಗೆ

ABOUT THE AUTHOR

...view details