ಕರ್ನಾಟಕ

karnataka

ETV Bharat / bharat

ಅಫ್ಘಾನಿಸ್ಥಾನದ ವಿಶ್ವಸಂಸ್ಥೆ ಕಚೇರಿ ಮೇಲೆ ತಾಲಿಬಾನ್ ದಾಳಿ : ಓರ್ವ ಸಾವು, ಹಲವರಿಗೆ ಗಾಯ

ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆಯನ್ನು ಹಿಂದೆಗೆದುಕೊಂಡ ಬಳಿಕ ತಾಲಿಬಾನಿಗಳ ಅಟ್ಟಹಾಸ ಮಿತಿ ಮೀರಿದ್ದು, ಜುಲೈ 30 ರಂದು ಹೆರಾತ್​ನ ವಿಶ್ವಸಂಸ್ಥೆ ಕಚೇರಿ ಮೇಲೂ ದಾಳಿ ನಡೆದಿದೆ. ತಾಲಿಬಾನಿಗಳೇ ಈ ದಾಳಿ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ.

By

Published : Jul 31, 2021, 10:33 AM IST

http://10.10.50.80:6060//finalout3/odisha-nle/thumbnail/31-July-2021/12627603_507_12627603_1627697055830.png
ವಿಶ್ವಸಂಸ್ಥೆ ಕಚೇರಿ ಮೇಲೆ ತಾಲಿಬಾನ್ ದಾಳಿ

ಕಾಬೂಲ್: ಅಫ್ಘಾನಿಸ್ತಾನದ ಹೆರಾತ್​ನಲ್ಲಿರುವ ವಿಶ್ವಸಂಸ್ಥೆಯ ಕಚೇರಿಯ ಮೇಲೆ ನಡೆದ ತಾಲಿಬಾನ್ ದಾಳಿಯಲ್ಲಿ ಓರ್ವ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ತಮ್ಮ ಕಚೇರಿ ಮೇಲೆ ಸರ್ಕಾರಿ ವಿರೋಧಿ ಗುಂಪು ಶುಕ್ರವಾರ ದಾಳಿ ನಡೆಸಿರುವುದಾಗಿ ಅಫ್ಘಾನಿಸ್ತಾನ ಯುಎನ್​ ಅಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತಾಲಿಬಾನಿಗಳೇ ದಾಳಿ ಮಾಡಿರುವುದಾಗಿ ಹೆರಾತ್​ನ ಮೂಲಗಳು ತಿಳಿಸಿವೆ. ಆದರೆ, ಇದುವರೆಗೆ ತಾಲಿಬಾನ್ ಇದುವರೆಗೆ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ವಿಶ್ವಸಂಸ್ಥೆಯ ಕಚೇರಿ ಮೇಲೆ ನಡೆದ ದಾಳಿ ಖಂಡನೀಯ. ಆದರೆ, ನಾವು ಹೆದರುವುದಿಲ್ಲ, ಎಲ್ಲವನ್ನು ಶಕ್ತಿಯುತವಾಗಿ ಎದುರಿಸುತ್ತೇವೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ಅಫ್ಘಾನಿಸ್ತಾನದ ಯುಎನ್​ ವಿಶೇಷ ಪ್ರತಿನಿಧಿ ಡೆಬೊರಾ ಲಿಯಾನ್ಸ್ ಹೇಳಿದ್ದಾರೆ.

ಓದಿ : ಪಾಕಿಸ್ತಾನ - ಚೀನಾ ಸಂಬಂಧ ಸದೃಢವಾಗಿದೆ: ಸೇನಾ ಮುಖ್ಯಸ್ಥ ಬಜ್ವಾ ಬಣ್ಣನೆ

ನಮ್ಮ ಮೊದಲ ಆದ್ಯತೆ ಮೃತಪಟ್ಟವರ ಕುಟುಂಬಕ್ಕೆ ನೆರವಾಗುವುದು ಮತ್ತು ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳುವಂತೆ ಮಾಡುವುದು. ರಾಕೆಟ್ ಚಾಲಿತ ಗ್ರೆನೇಡ್ ಮತ್ತು ಗುಂಡಿನಿಂದ ಯುಎನ್​ ಕಚೇರಿಯ ಪ್ರವೇಶದ್ವಾರಗಳ ಮೇಲೆ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಯಾವುದೇ ಯುಎನ್ ಸಿಬ್ಬಂದಿಗೆ ಗಾಯವಾಗಿಲ್ಲ ಎಂದು ವಿಶ್ವ ಸಂಸ್ಥೆ ಹೇಳಿದೆ.

ವಿಶ್ವ ಸಂಸ್ಥೆಯ ಕಚೇರಿ ಮೇಲೆ ದಾಳಿ ನಡೆಸಿದವರನ್ನು ಪತ್ತೆ ಹಚ್ಚಬೇಕಿದೆ. ಯುಎನ್​ ಕಚೇರಿ ಮೇಲೆ ದಾಳಿ ನಡೆಸುವುದು ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ನಿಷೇಧಿಸಲಾಗಿದೆ ಮತ್ತು ಇದು ಯುದ್ಧ ಅಪರಾಧಗಳಿಗೆ ಕಾರಣವಾಗಬಹುದು ಎಂದು ಯುಎನ್​ ಹೇಳಿದೆ.

ಕಳೆದ ಕೆಲ ದಿನಗಳಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಂಸಾಚಾರ ಉಲ್ಬಣಿಸಿದೆ. ತಾಲಿಬಾನಿಗಳು ಅಮಾಯಕ ನಾಗರಿಕರು ಮತ್ತು ಅಫ್ಘಾನ್ ಭದ್ರತಾ ಪಡೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಅಫ್ಘಾನ್ ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಕೆಲವೇ ವಾರಗಳಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಒಟ್ಟು 5,777 ನಾಗರಿಕರನ್ನು ತಾಲಿಬಾನಿಗಳು ಕೊಂದು ಹಾಕಿದ್ದಾರೆ.

ABOUT THE AUTHOR

...view details