ನವದೆಹಲಿ:ಎರಡನೇ ಹಂತದ ಕೋವಿಡ್ ಅಲೆ ಜೋರಾಗುತ್ತಿದ್ದಂತೆ ಅನೇಕ ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು, ಹೀಗಾಗಿ ಆಸ್ಪತ್ರೆಗಳಲ್ಲಿ ಸರಿಯಾದ ಆಮ್ಲಜನಕ ಲಭ್ಯವಾಗದೇ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನ ಮನಗೊಂಡಿರುವ ಸುಪ್ರೀಂಕೋರ್ಟ್ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದ್ದು, 12 ಸದಸ್ಯರ ರಾಷ್ಟ್ರೀಯ ಟಾಸ್ಕ್ ಫೋರ್ಸ್ ರಚನೆ ಮಾಡಿದೆ. ಜಸ್ಟೀಸ್ ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಈ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದು, ಆಕ್ಸಿಜನ್ ಹಂಚಿಕೆ ವಿಚಾರವಾಗಿ ಕೆಲಸ ಮಾಡಲಿದೆ. ಜತೆಗೆ ಸುಪ್ರೀಂಕೋರ್ಟ್ಗೆ ನೇರವಾಗಿ ವರದಿ ಸಲ್ಲಿಕೆ ಮಾಡಲಿದೆ.
ಇದನ್ನೂ ಓದಿ: 860 ಕೋಟಿ ರೂ. ಮೌಲ್ಯದ 126 ಕೆಜಿ ಹೆರಾಯಿನ್ ವಶ, ದಂಪತಿ ಬಂಧನ
ದೇಶದ ವಿವಿಧ ಆಸ್ಪತ್ರೆಗಳಿಗೆ ಸಮಪರ್ಕವಾಗಿ ಹಾಗೂ ತ್ವರಿತಗತಿಯಲ್ಲಿ ಆಕ್ಸಿಜನ್ ಪೂರೈಕೆ ಮಾಡಲು ಈ ಟಾಸ್ಕ್ಫೋರ್ಸ್ ನೇತೃತ್ವ ವಹಿಸಲಿದೆ. ಇದರಲ್ಲಿ ಬೆಂಗಳೂರಿನ ಡಾ. ದೇವಿಶೆಟ್ಟಿಗೂ ಅವಕಾಶ ನೀಡಲಾಗಿದೆ.
ಟಾಸ್ಕ್ ಫೋರ್ಸ್ನಲ್ಲಿ ಯಾರಿಗೆ ಅವಕಾಶ
- ಡಾ. ಬವತೋಷ ಬಿಸ್ವಾಸ್; ಪಶ್ಚಿಮ ಬಂಗಾಳದ ಆರೋಗ್ಯ ಮತ್ತು ವಿಜ್ಞಾನ ವಿವಿ ಮಾಜಿ ಉಪಕುಲಪತಿ
- ಡಾ. ದೇವೇಂದ್ರ ಸಿಂಗ್ ರಾಣಾ; ದೆಹಲಿ ಗಂಗಾ ರಾಮ್ ಆಸ್ಪತ್ರೆ ಅಧ್ಯಕ್ಷರು
- ಡಾ. ದೇವಿ ಶೆಟ್ಟಿ; ನಾರಾಯಣ ಹೇಲ್ತ್ ಕೇರ್ನ ಡೈರಕ್ಟರ್, ಬೆಂಗಳೂರು
- ಡಾ. ಗಗನ್ ದೀಪ್; ವೆಲ್ಲೂರು ಕ್ರಿಸ್ಚಿಯನ್ ಮೆಡಿಕಲ್ ಕಾಲೇಜ್ನ ಪ್ರೊಪೆಸರ್
- ಡಾ. ಜೆವಿ ಪಟಿರ್; ವೆಲ್ಲೂರು ಮೆಡಿಕಲ್ ಕಾಲೇಜ್ ಡೈರೆಕ್ಟರ್
- ಡಾ. ನರೇಶ್ ತೆಹ್ರಾನ್; ಗುರುಗ್ರಾಮ್ನ ಮೇದಾಂತ್ ಆಸ್ಪತ್ರೆ ಹಾಗೂ ಹಾರ್ಟ್ ಇನ್ಸ್ಟ್ಯೂಟ್
- ಡಾ. ರಾಹುಲ್ ಪಂಡಿತ್; ಕ್ರಿಟಿಕಲ್ ಕೇರ್ ಮೆಡಿಸಿನ್ ಹಾಗೂ ಪೋರ್ಟಿಸ್ ಆಸ್ಪತ್ರೆ ಮುಂಬೈನ ಡೈರೆಕ್ಟರ್
- ಡಾ. ಸುಮಿತ್ರಾ ರಾವತ್; ದೆಹಲಿ ಗಂಗಾ ರಾಮ್ ಆಸ್ಪತ್ರೆ
- ಡಾ. ಶಿವ ಕುಮಾರ್ ಸರ್ನಾ; ದೆಹಲಿ
- ಡಾ. ಜಾರೀರ್ ಉದ್ವಾದಿ; ಹಿಂದೂಜಾ ಆಸ್ಪತ್ರೆ ಮುಂಬೈ
ಟಾಸ್ಕ್ಪೋರ್ಸ್ಗೆ ಅಗತ್ಯವಿರುವ ಎಲ್ಲ ರೀತಿಯ ಸಹಾಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಈಗಾಗಲೇ ಸೂಚನೆ ಸಹ ನೀಡಿದೆ. ಮುಂದಿನ ಒಂದು ವಾರದಲ್ಲಿ ಟಾಸ್ಕ್ಪೋರ್ಸ್ ತನ್ನ ಕೆಲಸ ಆರಂಭ ಮಾಡಲಿದೆ.