ಕಾಂಕೇರ್(ಬಿಹಾರ):ಸಾಲಬಾಧೆಯಿಂದ ನೊಂದು 72 ಲಕ್ಷ ರೂ ವಿಮಾ ಮೊತ್ತ ಪಡೆಯಲು ಕಾರಿಗೆ ಬೆಂಕಿ ಹಚ್ಚಿ ನಾಪತ್ತೆಗೊಂಡಿದ್ದ ಕುಟುಂಬದ ರಹಸ್ಯವನ್ನು ಕಾಂಕೇರ್ ಪೊಲೀಸರು ಭೇದಿಸಿದ್ದಾರೆ. ಜಿಲ್ಲೆಯ ಪಾಖಂಜೂರು ಪಿವಿ ನಿವಾಸಿ ಸಮೀರನ್ ಸಿಕ್ದರ್ ಸಂಚು ರೂಪಿಸಿದ ಆರೋಪಿ. ವ್ಯಾಪಾರ ಮತ್ತು ಸಾಲದ ನಷ್ಟದಿಂದ ನೊಂದ ಸಮೀರನ್ ಮಾರ್ಚ್ 1 ರಂದು ರಾತ್ರಿ ಚಾರಾಮಾ ಪೊಲೀಸ್ ಠಾಣೆ ವ್ಯಾಪ್ತಿಯ ಚಾವಡಿ ಗ್ರಾಮದಲ್ಲಿ ಕಾರಿಗೆ ಬೆಂಕಿ ಹಚ್ಚಿ, ತಾನು ಸತ್ತಿರುವುದಾಗಿ ಸಾಬೀತುಪಡಿಸಿ ತನ್ನ ಕುಟುಂಬ ಸಹಿತ ನಾಪತ್ತೆಯಾಗಿದ್ದನು. ಕಾರು ಸವಾರನ ಕುಟುಂಬಕ್ಕಾಗಿ ಪೊಲೀಸರು ನಿರಂತರ ಹುಡುಕಾಟ ನಡೆಸುತ್ತಿದ್ದರು.
ಮಾರ್ಚ್ 13ರ ವರೆಗೆ ಕುಟುಂಬ ನಾಪತ್ತೆ ಆಗಿತ್ತು. ಮಾರ್ಚ್ 13 ರಂದು ಸಂಜೆ ಪೊಲೀಸರಿಗೆ ಸಮೀರನ್ ಸಿಕ್ದರ್ ಕುಟುಂಬವು ಪಾಖಂಜೂರ ಅವರ ಮನೆಯಲ್ಲಿದೆ ಎಂಬ ಮಾಹಿತಿ ಬಂದಿತ್ತು. ತಕ್ಷಣ ಸಮೀರನ್ ಸಿಕ್ದರ್ ಇರುವುದನ್ನು ಪತ್ತೆ ಹಚ್ಚಿ ಬಂಧಿಸಿದ್ದರು. ಈ ಘಟನೆ ಇಡೀ ಕಾಂಕೇರ್ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿತು. ಆರೋಪಿ ವಿಮಾ ಮೊತ್ತಕ್ಕಾಗಿ ಇಡೀ ಕುಟುಂಬವನ್ನು ನಾಪತ್ತೆ ಮಾಡಲು ಸಂಚು ರೂಪಿಸಿದ್ದನು ಎಂದು ಪೊಲೀಸರು ಬಹಿರಂಗ ಪಡಿಸಿದ್ದಾರೆ.
72 ಲಕ್ಷ ವಿಮಾ ಮೊತ್ತದ ಆಸೆಗೆ ಸಂಚು: ಆರೋಪಿಯೂ 72 ಲಕ್ಷ ರೂಪಾಯಿ ವಿಮಾ ಮೊತ್ತ ಪಡೆಯಲು ಸಂಚು ಮಾಡಿದ್ದನು. ಮಾರ್ಚ್ 1 2023 ರಂದು ಕಾಂಕೇರ್‌ನ ಚಾರಾಮಾ ರಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಕಾರು ಉರಿಯುತ್ತಿರುವುದು ಕಂಡುಬಂದಿದೆ. ಮಾರ್ಚ್ 1ರಂದು ಕುಟುಂಬ ಸಮೇತ ಆರೋಪಿ ಧಮ್ತಾರಿಯ ಲಾಡ್ಜ್‌ನಲ್ಲಿ ತಂಗಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಂದಿನಿಂದ ನಾಪತ್ತೆಯಾಗಿದ್ದ ಸಿಕ್ದರ್ ಕುಟುಂಬ ಸುರಕ್ಷಿತವಾಗಿದೆ ಎಂದು ಪೊಲೀಸರು ಭಾವಿಸಿದ್ದರು.
ಪೂರ್ವ ಪ್ಲಾನ್ ಮಾಡಿದ್ದ ಆರೋಪಿ:ಮಾರ್ಚ್ 1 ರಂದು ಸಮೀರನ್ ಸಿಕ್ದರ್ ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಕಾಂಕೇರ್‌ನಿಂದ ಹೊರಟರು. ನಂತರ ಧಮ್ತಾರಿಗೆ ತಲುಪಿದರು. ಕುಟುಂಬ ಸಮೇತ ಲಾಡ್ಜ್‌ನಲ್ಲಿ ತಂಗಿದ್ದರು. ಮಾರ್ಚ್ 1 ರಂದು ಕುಟುಂಬವನ್ನು ಧಮ್ತಾರಿಯಲ್ಲಿ ಬಿಟ್ಟು, ಅವರು ಕಾರಿನಲ್ಲಿ ಕಾಂಕೇರ್‌ನಲ್ಲಿ ಚಾರಾಮಕ್ಕೆ ಮರಳಿದರು. ಕಾರು ಮರಕ್ಕೆ ಡಿಕ್ಕಿ ಹೊಡೆದು ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಈ ಬೆಂಕಿಯಲ್ಲಿ ಸಿಕ್ದರ್ ತನ್ನ ಪೋನು ಎಸೆದಿದ್ದಾನೆ. ಆ ನಂತರ ಸ್ವತಃ ತಾವು ಜಮೀನಿನ ಮೂಲಕ ರಸ್ತೆಗೆ ಬಂದು ಬಸ್ ಹತ್ತಿ ತಮ್ಮ ಕುಟುಂಬ ವಾಸವಿದ್ದ ಧಮ್ತಾರಿಯ ಲಾಡ್ಜ್‌ಗೆ ಬಂದಿದ್ದಾನೆ.