ಉದಯಪುರ (ರಾಜಸ್ಥಾನ):ದಬೋಕ್‌ನ ಉದಯಪುರದ ಮಹಾರಾಣಾ ಪ್ರತಾಪ್ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಮುಖಾಮುಖಿಯಾಗಿದ್ದಾರೆ.
ಚುನಾವಣಾ ಪ್ರಚಾರದ ಬಳಿಕ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕಾಂಗ್ರೆಸ್ನ ಸಚಿನ್ ಪೈಲಟ್, ಅಜಯ್ ಮಾಕೆನ್, ರಘುವೀರ್ ಮೀನಾ, ಉದಯಲಾಲ್ ಅಂಜನಾ ಮತ್ತು ಬಿಜೆಪಿಯ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮುಖಾಮುಖಿಯಾಗಿದ್ದಾರೆ.
ಇದನ್ನು ಓದಿ:ಕಾಕಪೋರಾದಲ್ಲಿ ಸೇನೆ-ಪೊಲೀಸರ ಜಂಟಿ ಕಾರ್ಯಾಚರಣೆ: ಓರ್ವ ಉಗ್ರ ಹತ
ಚುನಾವಣಾ ಸಭೆಗಳನ್ನುದ್ದೇಶಿಸಿ ಭಾಷಣ ಮಾಡಿದ ಬಳಿಕ ಅವರು ತಮ್ಮ ವಿಮಾನ ಏರಲು ನಿಲ್ದಾಣಕ್ಕೆ ಆಗಮಿಸಿದ್ದರು. ಇನ್ನು ಈ ವೇಳೆ ಸಚಿನ್ ಪೈಲಟ್ ಮತ್ತು ಗಜೇಂದ್ರ ಸಿಂಗ್ ಶೇಖಾವತ್ ಭೇಟಿಯಾದ ಕೂಡಲೇ ಅವರು ಪರಸ್ಪರ ನಗುವಿನೊಂದಿಗೆ ಸ್ವಾಗತಿಸಿದ್ದಾರೆ ಎಂದು ಹೇಳಲಾಗಿದೆ.
ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕುಳಿತುಕೊಳ್ಳುವ ಫೋಟೋ ಸೆರೆಯಾಗಿದ್ದು, ಅಜಯ್ ಮಾಕೆನ್, ರಘುವೀರ್ ಮೀನಾ, ಉದಯಲಾಲ್ ಅಂಜನಾ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಸ್ಮಾರ್ಟ್‌ಫೋನ್‌ಗಳಲ್ಲಿ ಮಗ್ನರಾಗಿದ್ದಾರೆ.