ನಾಗ್ಪುರ : ಮಹಾರಾಷ್ಟ್ರ ರಾಜ್ಯದಲ್ಲಿ ಜಾತಿ ಆಧಾರಿತ ಜನಗಣತಿಗೆ ಜನರು ಬೇಡಿಕೆ ಇಟ್ಟಿದ್ದಾರೆ. ಆದರೆ, ಆರ್‌ಎಸ್‌ಎಸ್ ಜಾತಿ ಆಧಾರಿತ ಜನಗಣತಿ ವಿರೋಧಿಸಿದೆ ಎಂದು ವಿದರ್ಭ ವಲಯದ ಸಹ ಸಂಘಚಾಲಕ್ ಶ್ರೀಧರ ಗಾಡಗೆ ಇಂದು ನಾಗ್ಪುರದಲ್ಲಿ ಹೇಳಿದರು. ಜಾತಿ ಆಧಾರಿತ ಜನಗಣತಿಯನ್ನು ಆರ್‌ಎಸ್‌ಎಸ್ ವಿರೋಧಿಸಿದ ನಂತರ ವಿರೋಧ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಜಾತಿವಾರು ಜನಗಣತಿ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿದರ್ಭ ಪ್ರದೇಶದ ಸಹಸಂಚಾಲಕ್ ಶ್ರೀಧರ್ ಗಾಡ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಮಾತನಾಡಿದ ಅವರು, ಜಾತಿವಾರು ಜನಗಣತಿ ನಡೆದರೆ ಕಡಿಮೆ ಸಂಖ್ಯೆಯ ಅಥವಾ ಹೆಚ್ಚಿನ ಸಂಖ್ಯೆಯಲ್ಲಿರುವ ಸಮುದಾಯಗಳ ಮನಸ್ಸಿನಲ್ಲಿ ವಿಭಿನ್ನ ಭಾವನೆ ಮೂಡಲಿದೆ ಎಂದರು. ಜಾತಿವಾರು ಜನಗಣತಿಯಿಂದ ದೇಶಕ್ಕೆ ಏನು ಲಾಭ? ಎಂದು ರಾಜಕೀಯ ಮುಖಂಡರನ್ನು ಅವರು ಇದೇ ವೇಳೆ ಪ್ರಶ್ನಿಸಿದ್ದಾರೆ.
ಬಿಜೆಪಿ ಮತ್ತು ಶಿವಸೇನಾ ಮೈತ್ರಿಕೂಟದ ಸಚಿವರು ಮತ್ತು ಶಾಸಕರು ಇಂದು ರೇಶಿಂಬಾಗ್‌ನಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸ್ಮೃತಿ ಮಂದಿರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವೀಸ್ ಗೈರು ಹಾಜರಾಗಿದ್ದರು. ಎನ್‌ಸಿಪಿ ಶಾಸಕರು ಸಂಘದ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆಯೇ ಎಂಬುದರ ಮೇಲೆಯೇ ಎಲ್ಲರ ಕಣ್ಣುಗಳಿದ್ದವು.
ಶಾಸಕರಿಗೆ ಮಾರ್ಗದರ್ಶನ:ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಎನ್‌ಸಿಪಿ ಶಾಸಕ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ನಾಗ್ಪುರಕ್ಕೆ ಬರುವ ಬಿಜೆಪಿ ಶಾಸಕರು ಮತ್ತು ಮೈತ್ರಿ ಪಕ್ಷದ ಶಾಸಕರಿಗೆ ಮಾರ್ಗದರ್ಶನ ತರಗತಿಯನ್ನು ನಡೆಸಲಾಗುತ್ತದೆ. ವಿದರ್ಭ ವಲಯದ ಸಹ ಸಂಘಚಾಲಕ್ ಶ್ರೀಧರ್ ಗಾಡ್ಗೆ ಅವರು ಐದು ಅಂಶಗಳ (ಪಂಚಸೂತ್ರ) ಕುರಿತು ಶಾಸಕರಿಗೆ ಮಾರ್ಗದರ್ಶನ ನೀಡಿದರು.