ಕರ್ನಾಟಕ

karnataka

ETV Bharat / bharat

ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಅಲಿಘಡ್​ ಮುಸ್ಲಿಂ ವಿವಿ ಪ್ರಾಧ್ಯಾಪಕನಿಗೆ ನೋಟಿಸ್​

ಈ ಸಂಬಂಧ ಅಲಿಘಡ್​ ಮುಸ್ಲಿಂ ವಿವಿ ಟ್ವೀಟ್​ ಮಾಡಿದ್ದು, ಅತ್ಯಾಚಾರಕ್ಕೆ ಸಂಬಂಧಿಸದಂತೆ ಪುರಾಣವನ್ನು ಉಲ್ಲಂಘಿಸಿರುವುದನ್ನು ವಿಶ್ವವಿದ್ಯಾಲಯ ಮತ್ತು ಮೆಡಿಸಿನ್​ ವಿಭಾಗವು ಕಠಿಣವಾಗಿ ಖಂಡಿಸುತ್ತದೆ. ಅಲ್ಲದೇ, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಕಾರಣ ಡಾ.ಜೀತೇಂದ್ರಕುಮಾರ್​ ಅವರಿಗೆ ಶೋಕಾಸ್​ ನೋಟಿಸ್​ ನೀಡಲಾಗಿದೆ ಎಂದು ತಿಳಿಸಿದೆ..

ಅಲಿಘಡ್​ ಮುಸ್ಲಿಂ ವಿವಿ ಪ್ರಾಧ್ಯಾಪಕನಿಗೆ ನೋಟಿಸ್​
ಅಲಿಘಡ್​ ಮುಸ್ಲಿಂ ವಿವಿ ಪ್ರಾಧ್ಯಾಪಕನಿಗೆ ನೋಟಿಸ್​

By

Published : Apr 6, 2022, 3:24 PM IST

Updated : May 1, 2022, 6:35 PM IST

ಲಖನೌ(ಉತ್ತರಪ್ರದೇಶ) :ಉತ್ತರಪ್ರದೇಶದ ಅಲಿಘಡ್​ ಮುಸ್ಲಿಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಅತ್ಯಾಚಾರಕ್ಕೆ ಸಂಬಂಧಿಸಿದಂತೆ ದೇವರುಗಳನ್ನು ಉಲ್ಲೇಖಿಸಿರುವ ವಿಷಯ ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಆ ಪ್ರಾಧ್ಯಾಪಕರಿಗೆ ನೋಟಿಸ್​ ನೀಡಿ, ತನಿಖೆಗೆ ವಿವಿಯು ಆದೇಶಿಸಿದೆ.

ಪುರಾಣದಲ್ಲಿನ ನಿದರ್ಶನ ನೀಡಿ ಡಾ.ಜೀತೇಂದ್ರ ಕುಮಾರ್​ ಎಂಬುವರು ಸ್ಲೈಡ್​​ ರೂಪಿಸಿದ್ದಾರೆ. ಇದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಅಲ್ಲದೇ, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಗ್ರಾಸವಾಗಿದೆ. ಆದ್ದರಿಂದ ಈ ಬಗ್ಗೆ 24 ಗಂಟೆಯೊಳಗೆ ಉತ್ತರಿಸುವಂತೆ ವಿಶ್ವವಿದ್ಯಾಲಯವು ಡಾ.ಜೀತೇಂದ್ರಕುಮಾರ್​ ಅವರಿಗೆ ಸೂಚಿಸಿದೆ.

ಈ ಸಂಬಂಧ ಅಲಿಘಡ್​ ಮುಸ್ಲಿಂ ವಿವಿ ಟ್ವೀಟ್​ ಮಾಡಿದ್ದು, ಅತ್ಯಾಚಾರಕ್ಕೆ ಸಂಬಂಧಿಸದಂತೆ ಪುರಾಣವನ್ನು ಉಲ್ಲೇಖಿಸಿರುವುದನ್ನು ವಿಶ್ವವಿದ್ಯಾಲಯ ಮತ್ತು ಮೆಡಿಸಿನ್​ ವಿಭಾಗವು ಕಠಿಣವಾಗಿ ಖಂಡಿಸುತ್ತದೆ. ಅಲ್ಲದೇ, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಕಾರಣ ಡಾ.ಜೀತೇಂದ್ರಕುಮಾರ್​ ಅವರಿಗೆ ಶೋಕಾಸ್​ ನೋಟಿಸ್​ ನೀಡಲಾಗಿದೆ ಎಂದು ತಿಳಿಸಿದೆ.

ಜತೆಗೆ ಈ ಘಟನೆ ಸಂಬಂಧ ತನಿಖೆ ಮತ್ತು ಇಂತಹದ್ದು ಮತ್ತೆ ನಡೆಯದಂತೆ ತಡೆಯಲು ಒಬ್ಬರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ವಿವಿ ಹೇಳಿದೆ. ಅಲ್ಲದೇ, ಈಗಾಗಲೇ ಬೇಷರತ್​ ಕ್ಷಮೆಯನ್ನು ಪ್ರಾಧ್ಯಾಪಕ ಕೇಳಿದ್ದಾರೆ ಎಂದು ಪ್ರಕಟಣೆಯನ್ನು ಹೊರಡಿಸಿದೆ.

ಇದನ್ನೂ ಓದಿ:ಕೆಟಿಆರ್​​​​​​​ಗಾರು ಬೆಂಗಳೂರಿನೊಂದಿಗೆ ಸ್ಪರ್ಧಿಸುವುದನ್ನ ಬಿಡಿ, ಕರಾಚಿ - ಲಾಹೋರದೊಂದಿಗೆ ನೀವು ಸ್ಪರ್ಧಿಸಬಹುದು: ಬಿಜೆಪಿ ವ್ಯಂಗ್ಯ

Last Updated : May 1, 2022, 6:35 PM IST

ABOUT THE AUTHOR

...view details