ಕರ್ನಾಟಕ

karnataka

ETV Bharat / bharat

ಕುಟುಂಬದ ನಾಲ್ವರ ಹತ್ಯೆ ಕೇಸ್​.. ಮನೆ ಮಗನೇ ಬಾಯ್ಬಿಟ್ಟ ಮರ್ಡರ್ ಮಿಸ್ಟರಿ​! - ರೋಹ್ಟಕ್ ಮರ್ಡರ್

ಹಣದ ಆಸೆಗಾಗಿ ಯುವಕನೊಬ್ಬ ಕುಟುಂಬದ ನಾಲ್ವರನ್ನು ಹತ್ಯೆಗೈದಿರುವ ಘಟನೆ ಹರಿಯಾಣದ ರೋಹ್ಟಕ್​ನಲ್ಲಿ ನಡೆದಿದೆ.

ಕುಟುಂಬದ ನಾಲ್ವರ ಹತ್ಯೆ ಕೇಸ್
ಕುಟುಂಬದ ನಾಲ್ವರ ಹತ್ಯೆ ಕೇಸ್

By

Published : Sep 6, 2021, 1:45 PM IST

Updated : Sep 6, 2021, 2:17 PM IST

ರೋಹ್ಟಕ್(ಹರಿಯಾಣ): ಇಲ್ಲಿನ ವಿಜಯನಗರ ಕಾಲೋನಿಯಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಸ್​ಪಿ ಗೋರಖ್​ಪಾಲ್​ ರಾಣಾ ಮಾಧ್ಯಮಗೋಷ್ಟಿ ನಡೆಸಿ ಕೆಲ ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಆರೋಪಿ ಅಭಿಷೇಕ್​ ಮಲಗಿದ್ದ ತನ್ನ ಸಹೋದರಿಯನ್ನು ಹತ್ಯೆಗೈದ ಬಳಿಕ ತಾಯಿ, ಅಜ್ಜಿಯನ್ನೂ ಕೊಲೆ ಮಾಡಿದ್ದಾನೆ. ತಂದೆಗೂ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ ಎಂದು ತಿಳಿಸಿದ್ದಾರೆ. ನಾಲ್ವರು ಮೃತಪಟ್ಟ ನಂತರ ಅವರ ಮೇಲಿದ್ದ ಚಿನ್ನಾಭರಣಗಳನ್ನೂ ಆರೋಪಿ ಕದ್ದೊಯ್ದಿದ್ದಾನೆ.

ಅಭಿಷೇಕ್​ ಒಬ್ಬನಿಂದಲೇ ದುಷ್ಕೃತ್ಯ

ಅಭಿಷೇಕ್​ ಒಬ್ಬನೇ ಈ ದುಷ್ಕೃತ್ಯವೆಸಗಿದ್ದಾನೆ. ರೋಹ್ಟಕ್​ನ ವಿಜಯನಗರ ಕಾಲೋನಿಯಲ್ಲಿ ಆಗಸ್ಟ್ 27 ರಂದು ಒಂದೇ ಕುಟುಂಬದ ನಾಲ್ವರನ್ನು ಮನೆ ಮಗನೇ ಹತ್ಯೆಗೈದಿದ್ದನು. ಸದ್ಯ ಅವನೊಬ್ಬನೇ ಈ ಕೊಲೆಗಳನ್ನು ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕುಟುಂಬದ ನಾಲ್ವರು ಸದಸ್ಯರನ್ನು ಗುಂಡಿಕ್ಕಿ ಕೊಂದ ಮಾಜಿ ಗನ್​ಮ್ಯಾನ್​... ಕಾರಣ?

ಆರೋಪಿ ಬಂಧನದ ಬಳಿಕ ಆತನನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸಲಾಯಿತು. ಈ ವೇಳೆ ಆರೋಪಿಯು, ಮೊದಲು ತನ್ನ ರೂಮಿನಲ್ಲಿ ಮಲಗಿದ್ದ ತಂಗಿಯನ್ನು ಕೊಂದೆ, ಬಳಿಕ ಅಜ್ಜಿ, ಅಮ್ಮನನ್ನೂ ಗುಂಡುಹಾರಿಸಿ ಕೊಂದೆ. ಡ್ರಾಯಿಂಗ್​ ರೂಂನಲ್ಲಿ ಕುಳಿತಿದ್ದ ನನ್ನ ತಂದೆಗೆ ಮೂರು ಗುಂಡು ಹಾರಿಸಿ ಹತ್ಯೆಗೈದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೆ, ಎಲ್ಲರ ಹತ್ಯೆ ಬಳಿಕ ಆಭರಣಗಳನ್ನು ಕದ್ದೊಯ್ದಿದ್ದು, ಇದನ್ನು ದರೋಡೆಯಂತೆ ಬಿಂಬಿಸಿದ್ದಾನೆ.

Last Updated : Sep 6, 2021, 2:17 PM IST

ABOUT THE AUTHOR

...view details