ಕರ್ನಾಟಕ

karnataka

ETV Bharat / bharat

ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಲ್ಲಿ ಹಗಲು ದರೋಡೆ - ಕಥುನಂಗಲ್ ಪೊಲೀಸ್ ಠಾಣೆ

ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ನುಗ್ಗಿರುವ ಶಸ್ತ್ರಸಜ್ಜಿತ ದರೋಡೆಕೋರರು ಸುಮಾರು 18 ಲಕ್ಷ ರೂಪಾಯಿ ದೋಚಿದ್ದಾರೆ.

Robbery at Punjab National Bank in Amritsar
ದರೋಡೆಗೆ ಬಂದಿರುವ ಶಸ್ತ್ರಸಜ್ಜಿತ ವ್ಯಕ್ತಿ

By

Published : Dec 19, 2022, 3:22 PM IST

ಅಮೃತಸರ: ನಗರದ ಕಥುನಂಗಲ್​ನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ ಶಸ್ತ್ರಸಜ್ಜಿತ ದುಷ್ಕರ್ಮಿಗಳು ದರೋಡೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ, ಬೆಳಗ್ಗೆ 11 ಗಂಟೆ ಸುಮಾರಿಗೆ ಬ್ಯಾಂಕ್​ ಒಳಗೆ ನುಗ್ಗಿರುವ ದರೋಡೆಕೋರರು ಸುಮಾರು 18 ಲಕ್ಷ ರೂಪಾಯಿ ದೋಚಿದ್ದಾರೆ ಎಂದು ಹೇಳಲಾಗುತ್ತಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್​ನ ಈ ಶಾಖೆಯು ಕಥುನಂಗಲ್ ಪೊಲೀಸ್ ಠಾಣೆಯಿಂದ ಕೇವಲ 300 ಮೀಟರ್ ದೂರದಲ್ಲಿದೆ. ಸುಮಾರು ಹತ್ತು ವರ್ಷಗಳಿಂದ ಈ ಬ್ಯಾಂಕ್‌ನಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಂಡಿಲ್ಲ ಎನ್ನುವುದು ಆಶ್ಚರ್ಯಕರ ಸಂಗತಿ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದು, ಬ್ಯಾಂಕ್ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ.

ಇದನ್ನೂ ಓದಿ:ಚಾಕು ಹಿಡಿದು ದರೋಡೆಗೆ ಬಂದ ಕಿರಾತಕ.. ವೀರನಾರಿ ಮ್ಯಾನೇಜರ್​ಗೆ ಹೆದರಿ ಕಳ್ಳ ಪರಾರಿ- ವಿಡಿಯೋ

ABOUT THE AUTHOR

...view details