ಅಮೃತಸರ(ಪಂಜಾಬ್): ರಾಜಾರೋಷವಾಗಿ ಪೆಟ್ರೋಲ್ ಪಂಪ್ನಲ್ಲಿ ದರೋಡೆ ಮಾಡಲು ಬಂದ ಕಳ್ಳ ಅಲ್ಲಿನ ಭದ್ರತಾ ಸಿಬ್ಬಂದಿಯ ಗುಂಡೇಟಿಗೆ ಸ್ಥಳದಲ್ಲೇ ಮೃತಪಟ್ಟ ಘಟನೆ ಪಂಜಾಬ್ನ ಅಮೃತಸರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆ ಏನು?:ಅಮೃತಸರದಲ್ಲಿನ ಪೆಟ್ರೋಲ್ ಪಂಪ್ಗೆ ರಾತ್ರಿ ವೇಳೆ ಬೈಕ್ ಮೇಲೆ ಬಂದ ಇಬ್ಬರು ದರೋಡೆಕೋರರಲ್ಲಿ ಒಬ್ಬ ಪಿಸ್ತೂಲ್ ತೋರಿಸುತ್ತ ಬೆದರಿಸಿ ಸಿಬ್ಬಂದಿ ಬಳಿಯಿದ್ದ ಹಣವನ್ನು ದೋಚಿದ್ದಾನೆ. ಬಳಿಕ ಗ್ರಾಹಕನ ಬಳಿಯ ಹಣವನ್ನು ಕಸಿಯಲು ಮುಂದಾಗಿದ್ದಾನೆ.
ಈ ವೇಳೆ ಅಲ್ಲಿಯೇ ಇದ್ದ ಭದ್ರತಾ ಸಿಬ್ಬಂದಿ ಬಂದೂಕಿನಿಂದ ದರೋಡೆಕೋರನ ಮೇಲೆ ಗುಂಡು ಹಾರಿಸಿದ್ದಾರೆ. ಎದೆಗೆ ಗುಂಡು ತಗುಲಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ದರೋಡೆಕೋರ ಬೈಕ್ನಲ್ಲಿ ಪರಾರಿಯಾಗಿದ್ದಾನೆ.
ಮೊದಲು 80 ಸಾವಿರ ದೋಚಿದ್ದ ಖದೀಮ:ಇದಕ್ಕೂ ಮೊದಲು ಇದೇ ಪೆಟ್ರೋಲ್ ಪಂಪ್ನಲ್ಲಿ ದರೋಡೆಕೋರ ಬಂದೂಕು ತೋರಿಸಿ ಬೆದರಿಸಿ 80 ಸಾವಿರ ರೂಪಾಯಿ ದೋಚಿದ್ದ. ಇದರಿಂದ ಬಂಕ್ ಆಡಳಿತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿತ್ತು. ಭಾನುವಾರ ಮತ್ತೆ ಅದೇ ಬಂಕ್ಗೆ ಬಂದು ದರೋಡೆ ಮಾಡುವಾಗ ಪ್ರಾಣ ಕಳೆದುಕೊಂಡಿದ್ದಾನೆ. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪಂಜಾಬ್ ಬಂಕ್ನಲ್ಲಿ ಲೂಟಿಕೋರನ ಹತ್ಯೆ ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ದರೋಡೆಕೋರರು ಈ ಮೊದಲೂ ಬಂಕ್ ಲೂಟಿ ಮಾಡಿದ್ದರು. ಎಚ್ಚೆತ್ತುಕೊಂಡ ಸಿಬ್ಬಂದಿ ಸೆಕ್ಯೂರಿಟಿ ನೇಮಿಸಿಕೊಂಡಿದ್ದರು. ನಿನ್ನೆ ರಾತ್ರಿ ಮತ್ತೆ ದರೋಡೆಗೆ ಬಂದಾಗ ಭದ್ರತಾ ಸಿಬ್ಬಂದಿಯ ಗುಂಡೇಟಿಗೆ ಕಳ್ಳ ಹತನಾಗಿದ್ದಾನೆ. ಈತನಿಂದ ಪಿಸ್ತೂಲ್ ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಓದಿ:ಕುಸಿದು ಬಿದ್ದ ಮೊರ್ಬಿ ಸೇತುವೆ.. ಸಿಸಿಟಿವಿಯಲ್ಲಿ ಸೇತುವೆ ಕುಸಿಯುತ್ತಿರುವ ದೃಶ್ಯ ಸೆರೆ!