ಕರ್ನಾಟಕ

karnataka

By

Published : Dec 2, 2020, 10:08 PM IST

ETV Bharat / bharat

2021ರ ಗಣರಾಜ್ಯೋತ್ಸವ: ಇಂಗ್ಲೆಂಡ್​ ಪ್ರಧಾನಿ ಬೋರಿಸ್ ಜಾನ್ಸನ್ ಮುಖ್ಯ ಅತಿಥಿ

ಭಾರತ ಹಾಗೂ ಇಂಗ್ಲೆಂಡ್​ ನಾಯಕರ ನಡುವೆ ಈ ಬಗ್ಗೆ ದೂರವಾಣಿ ಸಂಭಾಷಣೆ ನಡೆದಿದ್ದು, ಕರೆಯ ಮೂಲಕ ಭಾರತಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ಹೇಳುತ್ತಿವೆ.

Modi-Boris
ಮೋದಿ

ನವದೆಹಲಿ: ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಆಚರಣೆಗೆ ಮುಖ್ಯ ಅತಿಥಿಯಾಗಿ ಭಾರತಕ್ಕೆ ಭೇಟಿ ನೀಡುವಂತೆ ಭಾರತ ಸರ್ಕಾರವು ಇಂಗ್ಲೆಂಡ್​ ಪ್ರಧಾನಿ ಬೋರಿಸ್ ಜಾನ್ಸನ್‌ ಅವರಿಗೆ ಆಹ್ವಾನ ನೀಡಿದೆ.

ಉಭಯ ರಾಷ್ಟ್ರಗಳ ನಡುವೆ ಈ ಬಗ್ಗೆ ದೂರವಾಣಿ ಸಂಭಾಷಣೆ ನಡೆದಿದ್ದು, ಕರೆಯ ಮೂಲಕ ಭಾರತಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ಹೇಳುತ್ತಿವೆ.

ಜಾನ್ಸನ್ ಅವರೊಂದಿಗಿನ ಟೆಲಿಫೋನ್​ ಸಂಭಾಷಣೆಯ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು "ವ್ಯಾಪಾರ ಮತ್ತು ಹೂಡಿಕೆ, ರಕ್ಷಣಾ ಮತ್ತು ಭದ್ರತೆ, ಹವಾಮಾನ ಬದಲಾವಣೆ, ಮತ್ತು ಕೋವಿಡ್​-19 ವಿರುದ್ಧ ಹೋರಾಡುವ ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಸಹಕಾರದಲ್ಲಿ ಒಗ್ಗೂಡಿ ಕೆಲಸ ಮಾಡಲು ಒಪ್ಪಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೇ ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ 2021ರಲ್ಲಿ ಲಂಡನ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ. ಬ್ರಿಟಿಷ್ ಪ್ರಧಾನಿ ಅವರಿಗೆ ಆಹ್ವಾನ ನೀಡಿದ್ದರು. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಪ್ರಸ್ತಾಪದ ಭಾಗವಾಗಿದೆ. ಸದಸ್ಯರ ಗ್ರೂಪ್​ ವಿಸ್ತರಿಸುವ ಸಲುವಾಗಿ ಭಾರತವನ್ನು ಜಿ -7ನಲ್ಲಿ ಸೇರಿಸುವ ಪ್ರಯತ್ನ ಇದಾಗಿದೆ.

ಮೋದಿಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಯುಕೆ ಪ್ರಧಾನಿ, ಧನ್ಯವಾದಗಳು ನರೇಂದ್ರ ಮೋದಿ. ನಿಮ್ಮೊಂದಿಗೆ ಮಾತನಾಡಿದ್ದು, ಅದ್ಭುತವಾಗಿದೆ. 2021 ಮತ್ತು ಅದಕ್ಕೂ ಮೀರಿದ ಯುಕೆ-ಇಂಡಿಯಾ ಸಂಬಂಧ ಇನ್ನಷ್ಟು ಗಾಢವಾಗಿಸಲು ಮತ್ತು ಬಲಪಡಿಸಲು ನಾನು ಆಸಕ್ತಿಯಿಂದ ಎದುರು ನೋಡುತ್ತಿದ್ದೇನೆ! ಎಂದರು.

ABOUT THE AUTHOR

...view details