ಉಧಂಪುರ್(ಜಮ್ಮು ಕಾಶ್ಮೀರ): ಉದಯ್ಪುರದಲ್ಲಿ ಇತ್ತೀಚೆಗೆ ನಡೆದ ಹಿಂದೂ ಟೈಲರ್ನ ಶಿರಚ್ಛೇದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕಿಸಾನ್ ಯೂನಿಯನ್ ಮಾಜಿ ವಕ್ತಾರ ರಾಕೇಶ್ ಟಿಕಾಯತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷದ ಆಡಳಿತವಿರುವ ರಾಜ್ಯಗಳಲ್ಲೇ ಇಂಥ ಪ್ರಕರಣಗಳು ಏಕೆ ಸಂಭವಿಸುತ್ತಿವೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ದ್ವೇಷದಿಂದ ಕೆಲವು ಅಹಿತಕರ ಘಟನೆಗಳು ನಡೆದರೂ ಅದರ ಹಿಂದೆ ಪಾಕಿಸ್ತಾನ ಕೈವಾಡವಿದೆ ಎಂದು ಬಿಜೆಪಿ ಹೇಳುತ್ತದೆ ಅಂತಾ ಟಿಕಾಯತ್ ಹರಿಹಾಯ್ದಿದ್ದಾರೆ.
ಬಿಜೆಪಿ ಸರ್ಕಾರವಿರದ ರಾಜ್ಯಗಳಲ್ಲಿ ಈ ಪ್ರಕರಣ ನಡೆದಿದೆ. ಪಂಜಾಬ್ ಅಥವಾ ರಾಜಸ್ಥಾನದಲ್ಲಿ ಇಂಥ ಘಟನೆಗಳು ನಡೆಯುತ್ತಿವೆ. ಯಾವುದೇ ಅಹಿತಕರ ಘಟನೆಗಳು ನಡೆದರೂ ಅದರ ಹಿಂದೆ ಪಾಕಿಸ್ತಾನ ಕೈವಾಡವಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತೆ. ಭಾರತವು ಸಂವಿಧಾನ, ಕಾನೂನು ಮತ್ತು ಕಾಯ್ದೆಗಳನ್ನು ಹೊಂದಿದೆ. ಕೊಲೆ ಮಾಡಿದವರನ್ನು ಸೆಕ್ಷನ್ 302 ರಡಿ ಬಂಧಿಸಿ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ರಾಕೇಶ್ ಟಿಕಾಯತ್ ಒತ್ತಾಯಿಸಿದರು.