ಕರ್ನಾಟಕ

karnataka

ETV Bharat / bharat

Social media contest: ಜನ'ಮನ' ತಿಳಿಯಲು ರಾಜಸ್ಥಾನ ಸರ್ಕಾರದಿಂದ 'ಸಾಮಾಜಿಕ ಮಾಧ್ಯಮ ಸ್ಪರ್ಧೆ'... ಪ್ರತಿ ದಿನವೂ ಬಹುಮಾನ

ರಾಜಸ್ಥಾನ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಜನರೊಂದಿಗೆ ಸಂಪರ್ಕ ಸಾಧಿಸಲು 'ಸಾಮಾಜಿಕ ಮಾಧ್ಯಮ ಸ್ಪರ್ಧೆ'ಗೆ ಚಾಲನೆ ನೀಡಿದೆ. ಇಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ವಿಡಿಯೋ ಮಾಡಿ ಹಂಚಿಕೊಳ್ಳಬೇಕು.

ಸಾಮಾಜಿಕ ಮಾಧ್ಯಮ ಸ್ಪರ್ಧೆ
ಸಾಮಾಜಿಕ ಮಾಧ್ಯಮ ಸ್ಪರ್ಧೆ

By

Published : Jul 8, 2023, 10:23 AM IST

ಜೈಪುರ:ರಾಜಸ್ಥಾನ ವಿಧಾನಸಭೆಗೆ ಈ ವರ್ಷ ಚುನಾವಣೆ ನಡೆಯಲಿದ್ದು, ಸಿಎಂ ಅಭ್ಯರ್ಥಿ ಘೋಷಿಸದೇ ಚುನಾವಣೆ ಎದುರಿಸಲು ಕಾಂಗ್ರೆಸ್​ ರಣತಂತ್ರ ರೂಪಿಸಿದೆ. ಸಿಎಂ ಅಶೋಕ್​ ಗೆಹ್ಲೋಟ್​ ಮತ್ತು ಪಕ್ಷದ ಪ್ರಭಾವಿ ನಾಯಕ ಸಚಿನ್​ ಪೈಲಟ್​ ಮಧ್ಯೆ ಬಹಿರಂಗ ಕಿತ್ತಾಟದಿಂದ ಪಕ್ಷ ಹಲವು ಬಾರಿ ಮುಜುಗರಕ್ಕೀಡಾಗಿದೆ. ಇದರ ಪ್ರಭಾವ ಚುನಾವಣೆಯ ಮೇಲೆ ಬೀರುವುದನ್ನು ತಡೆಯಲು ಪಕ್ಷ ಹರಸಾಹಸ ನಡೆಸುತ್ತಿದೆ.

ಇದರ ಭಾಗವಾಗಿ ಸಿಎಂ ಅಶೋಕ್​ ಗೆಹ್ಲೋಟ್​ ಅವರು ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ಸ್ಪರ್ಧೆಯನ್ನು ಪ್ರಾರಂಭಿಸಿದೆ. ಅಂದರೆ ಸ್ಪರ್ಧೆಯಲ್ಲಿ ಸರ್ಕಾರದ 10 ಯೋಜನೆಗಳ ಉತ್ತಮ ವಿಡಿಯೋಗಳನ್ನು ಹಂಚಿಕೊಳ್ಳುವವರನ್ನು ಸರ್ಕಾರ ಸನ್ಮಾನಿಸಲಿದೆ. ಜನರೊಂದಿಗೆ ನೇರವಾಗಿ ಸಂಪರ್ಕ ಹೊಂದಲು ಇದು ನೆರವು ನೀಡಲಿದೆ. ಹೀಗಾಗಿ ಸಿಎಂ ಶುಕ್ರವಾರದಂದು ಸಾಮಾಜಿಕ ಮಾಧ್ಯಮ ಸ್ಪರ್ಧೆಗೆ ಚಾಲನೆ ನೀಡಿದರು.

ಈ ಬಗ್ಗೆ ಮಾತನಾಡಿರುವ ಸಿಎಂ ಗೆಹ್ಲೋಟ್​, ಸರ್ಕಾರದ ಯೋಜನೆಗಳಿಂದ ವಂಚಿತರಾದ 15 ಲಕ್ಷ ಜನರನ್ನು ತಲುಪಲು ಈ ಸ್ಪರ್ಧೆಯನ್ನು ಪ್ರಾರಂಭಿಸಲಾಗಿದೆ. ಯುವಕರ ಆತ್ಮವಿಶ್ವಾಸವೂ ಈ ಯೋಜನೆಯಿಂದ ಬಲಗೊಳ್ಳಲಿದೆ. ಜನರು ಸರ್ಕಾರದ ಬಗ್ಗೆ ಹೊಂದಿರುವ ಅಭಿಪ್ರಾಯವೂ ಇದರಿಂದ ಗೋಚರವಾಗಲಿದೆ. ಸ್ಪರ್ಧೆಯಲ್ಲಿ ಅರ್ಹ ವ್ಯಕ್ತಿಗಳಿಗೆ ಪ್ರತಿದಿನ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಹೇಗಿರುತ್ತೆ ಈ ಸ್ಪರ್ಧೆ:ರಾಜಸ್ಥಾನ ಸರ್ಕಾರದ ಈ ಯೋಜನೆಯು ವಿಡಿಯೋ ಆಧರಿತವಾಗಿದೆ. ಇಲ್ಲಿ ಸರ್ಕಾರದ 10 ಪ್ರಮುಖ ಯೋಜನೆಗಳ ಕುರಿತು ಪ್ರಶ್ನೆಗಳಿರುತ್ತವೆ. ಪ್ರತಿ ಯೋಜನೆಗೆ ಸಂಬಂಧಿಸಿದ ಮಾಹಿತಿಯುಳ್ಳ ವಿಡಿಯೋವನ್ನು ಜನರು ಹಂಚಿಕೊಳ್ಳಬೇಕು. ಪ್ರತಿ ವಿಡಿಯೋ ಯೋಜನೆಯ ಲಾಭ, ಉದ್ದೇಶ ಮತ್ತಿತರ ಮಾಹಿತಿಯನ್ನು ಹೊಂದಿರಬೇಕು. ಸ್ಪರ್ಧೆಯಲ್ಲಿ ವಿಜೇತ ಜನರಿಗೆ ಸರ್ಕಾರ 1 ಸಾವಿರದಿಂದ 1 ಲಕ್ಷ ರೂಪಾಯಿಗಳವರೆಗೆ ಬಹುಮಾನ ನೀಡಲಾಗುತ್ತದೆ.

ಅರ್ಹತೆಗಳೇನು?:ಸ್ಪರ್ಧೆಯಲ್ಲಿ ಭಾಗವಹಿಸಲು ಮೂಲತಃ ರಾಜಸ್ಥಾನದ ನಿವಾಸಿಯಾಗಿರಬೇಕು. ಯೋಜನೆಯ ಫಲಾನುಭವಿಯೂ ಆಗಿರಬೇಕು. ಮೊದಲ ಮೂವರು ವಿಜೇತರಿಗೆ ತಲಾ 1 ಲಕ್ಷ, 50 ಸಾವಿರ, 25 ಸಾವಿರ ನಗದು ಬಹುಮಾನ ಸಿಗಲಿದೆ. ಉಳಿದ 100 ವಿಜೇತರಿಗೆ 1000 ರೂಪಾಯಿ ಬಹುಮಾನ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಸಿಎಂ ಘೋಷಿಸದೇ ಸೆಣಸು:ರಾಜಸ್ಥಾನದಲ್ಲಿ ಸಚಿನ್​ ಪೈಲಟ್​ ಮತ್ತು ಅಶೋಕ್​ ಗೆಹ್ಲೋಟ್​ ಅವರ ಬಹಿರಂಗ ಕಾದಾಟದಿಂದಾಗಿ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಇದರಿಂದ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿ ಯಾರೆಂಬುದನ್ನು ಘೋಷಿಸದೇ ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಚುನಾವಣೆಯನ್ನು ಎದುರಿಸಲು ಮುಂದಾಗಿದೆ. ಇದು ಪೈಲಟ್​ ಮತ್ತು ಗೆಹ್ಲೋಟ್​ ನಡುವಿನ ತಿಕ್ಕಾಟದ ಸಂಧಾನಸೂತ್ರ ಎಂದೇ ಹೇಳಲಾಗಿದೆ.

ಇದನ್ನೂ ಓದಿ:ರಾಜಸ್ಥಾನದಲ್ಲೂ ಕರ್ನಾಟಕದ ಪ್ರಯೋಗ: ಗೆಹ್ಲೋಟ್‌ ಸರ್ಕಾರದಿಂದ ಪ್ರತಿ ಮನೆಗೆ 100 ಯೂನಿಟ್‌ ವಿದ್ಯುತ್ ಫ್ರೀ!

ABOUT THE AUTHOR

...view details