ನವದೆಹಲಿ:ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ 78ನೇ ಜಯಂತಿ ಕಾರಣ ಪ್ರಧಾನಿ ನರೇಂದ್ರ ಮೋದಿ, ಪುತ್ರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಟ್ವೀಟ್ ಮಾಡಿ ಸ್ಮರಿಸಿದರು.
ಕಾಂಗ್ರೆಸ್ನ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಜೀವ್ ಗಾಂಧಿ ಅವರ ವೀರ ಭೂಮಿಗೆ ಭೇಟಿ ನೀಡಿ ಶ್ರದ್ಧಾಂಜಲಿ ಅರ್ಪಿಸಿದರು. ಬಳಿಕ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಅಪ್ಪಾಜಿ ನೀವು ನನ್ನ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದೀರಿ. ನೀವು ಪಾಲಿಸಿದ ರಾಷ್ಟ್ರದ ಕನಸುಗಳನ್ನು ನನಸಾಗಿಸಲು ನಾನು ಎಂದಿಗೂ ಪ್ರಯತ್ನಿಸುವೆ" ಎಂದು ಬರೆದಿದ್ದಾರೆ.
ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ರಾಜೀವ್ ಗಾಂಧಿ ಅವರನ್ನು ನೆನೆದಿದ್ದಾರೆ. "ನಮ್ಮ ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ ಅವರಿಗೆ ನಮನಗಳು. ಜನ್ಮದಿನದಂದು ಅವರನ್ನು ಸ್ಮರಿಸಲಾಗುವುದು" ಎಂದು ಟ್ವೀಟ್ ಮಾಡಿದ್ದಾರೆ.
ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನವನ್ನು ನಾವು ಪ್ರೀತಿಯಿಂದ ಸ್ಮರಿಸುತ್ತೇವೆ. '21 ನೇ ಶತಮಾನದ ಭಾರತದ ವಾಸ್ತುಶಿಲ್ಪಿ' ಎಂದು ಹೆಸರುವಾಸಿಯಾದ ಅವರ ದೂರದೃಷ್ಟಿಯಿಂದ ಭಾರತದಲ್ಲಿ ಐಟಿ ಮತ್ತು ಟೆಲಿಕಾಂ ಕ್ರಾಂತಿ ಉಂಟಾಯಿತು. ಈಗ ನಾವು ಅವರ ಪರಂಪರೆಯನ್ನು ಆಚರಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ನಲ್ಲಿ ಶ್ಲಾಘಿಸಲಾಗಿದೆ.
ಓದಿ:ಪಂಜಾಬ್ಗೆ ಪಿಎಂ ಮೋದಿ ಭೇಟಿ ಹಿನ್ನೆಲೆ..ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗೆ ಸಿದ್ಧತೆ ಕೈಗೊಂಡಿರುವ ಆಪ್ ಸರ್ಕಾರ