ಕರ್ನಾಟಕ

karnataka

ETV Bharat / bharat

'ಭಾರತ ಮಾತೆ ಪ್ರತಿಯೊಬ್ಬ ಭಾರತೀಯನ ಧ್ವನಿ': ದೇಶವಾಸಿಗಳಿಗೆ ಶುಭಾಶಯ ಕೋರಿದ ರಾಹುಲ್, ಖರ್ಗೆ - 77ನೇ ಸ್ವಾತಂತ್ರ್ಯ ದಿನಾಚರಣೆ

77th Independence Day: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ದೇಶ ಹಾಗೂ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ.

Rahul, Kharge
ರಾಹುಲ್, ಖರ್ಗೆ

By

Published : Aug 15, 2023, 10:01 AM IST

ನವದೆಹಲಿ:77ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿ ಇಂದು ದೇಶದ ಜನತೆಗೆ ಶುಭ ಹಾರೈಸಿದ್ದಾರೆ.

"ನಿಮ್ಮೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು" ಎಂದು ಖರ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟರ್)ನಲ್ಲಿ ಬರೆದಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ನಮ್ಮ ದೇಶದ ಆತ್ಮ. ದೇಶದ ಏಕತೆ ಮತ್ತು ಸಮಗ್ರತೆ, ಪ್ರೀತಿ ಮತ್ತು ಸಹೋದರತೆ, ಸೌಹಾರ್ದತೆಗಾಗಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತೇವೆ ಎಂದು ಈ ಪ್ರಮಾಣ ವಚನ ಸ್ವೀಕರಿಸುತ್ತೇವೆ ಎಂದು ಪೋಸ್ಟ್​ನಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಇಂದು ದೇಶದ ಜನತೆಗೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ ಮತ್ತು ಭಾರತ ಮಾತೆಯನ್ನು ಪ್ರತಿಯೊಬ್ಬ ಭಾರತೀಯನ ಧ್ವನಿ ಎಂದು ಕರೆದಿದ್ದಾರೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ "ಭಾರತ ಮಾತೆ ಪ್ರತಿಯೊಬ್ಬ ಭಾರತೀಯನ ಧ್ವನಿ. ಎಲ್ಲ ದೇಶವಾಸಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು" ಎಂದು ಪೋಸ್ಟ್​ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮಿಳುನಾಡಿನ ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ ತಮ್ಮ 'ಭಾರತ್ ಜೋಡೋ ಯಾತ್ರೆ'ಯ 2.57 ನಿಮಿಷಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

'ಭಾರತ ಮಾತೆ ಪ್ರತಿಯೊಬ್ಬ ಭಾರತೀಯನ ಧ್ವನಿ': "ನನ್ನ ಪ್ರೀತಿಯ ಭಾರತ ಮಾತೆ ಒಂದು ನಾಡಾಗಿರಲಿಲ್ಲ. ಅದು ಕಲ್ಪನೆಗಳ ಗುಂಪಾಗಿರಲಿಲ್ಲ. ಅದು ಒಂದು ನಿರ್ದಿಷ್ಟ ಸಂಸ್ಕೃತಿ, ಇತಿಹಾಸ ಅಥವಾ ಧರ್ಮವಾಗಿರಲಿಲ್ಲ. ಜನರು ನಿಗದಿಪಡಿಸಿದ ಜಾತಿಯೂ ಅಲ್ಲ. ಭಾರತವು ಪ್ರತಿಯೊಬ್ಬ ಭಾರತೀಯನ ಧ್ವನಿಯಾಗಿತ್ತು. ಎಷ್ಟೇ ದುರ್ಬಲ ಅಥವಾ ಬಲವಾಗಿರಲಿ. ಭಾರತವು ಸಂತೋಷ, ಭಯ ಮತ್ತು ನೋವು ಎಲ್ಲ ಧ್ವನಿಗಳಲ್ಲಿ ಆಳವಾಗಿ ಅಡಗಿತ್ತು" ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

"ಭಾರತ ಧ್ವನಿಯನ್ನು ಕೇಳಲು, ನನ್ನ ಸ್ವಂತ ಧ್ವನಿ - ನನ್ನ ಆಸೆಗಳು - ನನ್ನ ಮಹತ್ವಾಕಾಂಕ್ಷೆಗಳು ಮೌನವಾಗಬೇಕಾಯಿತು. ಭಾರತವು ತನ್ನದೇ ಆದ ಒಬ್ಬರೊಂದಿಗೆ ಮಾತನಾಡುತ್ತದೆ. ಆದರೆ, ಒಬ್ಬರು ಮಾತ್ರ ವಿನಮ್ರ ಮತ್ತು ಸಂಪೂರ್ಣವಾಗಿ ಮೌನವಾಗಿದ್ದರೆ" ಎಂದು ಗಾಂಧಿ ಹೇಳಿದರು.

'ಭಾರತ್ ಜೋಡೋ ಯಾತ್ರೆ'ಯ ಅನುಭವವನ್ನು ಸಹ ಕಾಂಗ್ರೆಸ್ ನಾಯಕ ಹಂಚಿಕೊಂಡಿದ್ದಾರೆ. ಸಮುದ್ರದ ಅಂಚಿನಲ್ಲಿ 145 ದಿನಗಳ ನಡಿಗೆಯನ್ನು ಪ್ರಾರಂಭಿಸಿ ಕಾಶ್ಮೀರದ ಹಿಮವನ್ನು ತಲುಪಿದ್ದೇನೆ ಎಂದು ಹೇಳಿದರು. ಕಳೆದ ವರ್ಷ ನಾನು ಮನೆ ಎಂದು ಕರೆಯುವ ಭೂಮಿಯಲ್ಲಿ 145 ದಿನಗಳನ್ನು ಕಳೆದಿದ್ದೇನೆ. ನಾನು ಸಮುದ್ರದ ಅಂಚಿನಲ್ಲಿ ಪ್ರಾರಂಭಿಸಿ ಕಾಡು, ಪಟ್ಟಣ ​​ಮತ್ತು ಬೆಟ್ಟಗಳ ಮೂಲಕ ನಾನು ನನ್ನ ಪ್ರೀತಿಯ ಕಾಶ್ಮೀರದ ಮೃದುವಾದ ಹಿಮವನ್ನು ತಲುಪುವವರೆಗೆ ಬಿಸಿಲು ಮಳೆಯನ್ನು ಲೆಕ್ಕಿಸದೇ ನಡೆದಿದ್ದೇನೆ" ಎಂದು ಅವರು ಹೇಳಿದರು.

ತಮ್ಮ ಯಾತ್ರೆಯನ್ನು ನಡೆಸುವಾಗ ಅವರು ಎದುರಿಸಿದ ನೋವು ಮತ್ತು ಯಾತ್ರೆಯನ್ನು ಮುಂದುವರೆಸಲು ಸಹಾಯ ಮಾಡಿದ ಜನರ ಪ್ರೇರಣೆಯನ್ನೂ ಅವರು ಪ್ರಸ್ತಾಪಿಸಿದರು. ಭಾರತ್ ಜೋಡೋ ಯಾತ್ರೆಯು ತನ್ನ ಅತ್ಯಂತ ನಿರ್ಣಾಯಕ ಸಾಮೂಹಿಕ ಜನ ಸಂಪರ್ಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದು ಕಾಂಗ್ರೆಸ್ ಈ ಹಿಂದೆ ಹೇಳಿತ್ತು.

ನಾಡಿನ ಜನತೆಗೆ ಶುಭಕೋರಿದ ಸಿಎಂ, ಡಿಸಿಎಂ: ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ರಾಜ್ಯ ಕಾಂಗ್ರೆಸ್​ ಟ್ವೀಟ್​ ಮಾಡಿದೆ.

’’ಇಂದಿನ ಸ್ವಾತಂತ್ರ್ಯ ದಿನಾಚರಣೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಫಲವಾಗಿದೆ. ಸ್ವಾತಂತ್ರ್ಯ ಚಳವಳಿಗಳು ಬ್ರಿಟಿಷರ ನಿರಂಕುಶ ಆಡಳಿತದ ವಿರುದ್ಧದ ಹೋರಾಟ ಮತ್ತು ನಮ್ಮ ಸ್ವಂತ ಜನರಿಗೆ ಹಕ್ಕುಗಳನ್ನು ಖಾತರಿಪಡಿಸುವ ಪ್ರಯತ್ನವಾಗಿದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ನೆನಪಿಟ್ಟುಕೊಳ್ಳಲು ಮತ್ತು ನಮ್ಮ ಜನರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳನ್ನು ಖಾತರಿಪಡಿಸುವ ನಮ್ಮ ಹೋರಾಟವನ್ನು ಮುಂದುವರಿಸಲು ಸ್ವಾತಂತ್ರ್ಯ ದಿನವು ನಮಗೆಲ್ಲರಿಗೂ ನೆನಪಿಸುತ್ತದೆ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು‘‘ - ಮುಖ್ಯಮಂತ್ರಿ ಸಿದ್ದರಾಮಯ್ಯ.

ಭಾರತ ಸ್ವಾತಂತ್ರ್ಯ ಚಳವಳಿ ಕೇವಲ‌ ಬ್ರಿಟಿಷರಿಂದ ಸಿಕ್ಕ ಮುಕ್ತಿಯಲ್ಲ. ಬದಲಾಗಿ ಭಾರತೀಯರ ವೈವಿಧ್ಯಮಯ ಸಂಸ್ಕೃತಿ, ಭಾಷೆ, ಸಂಪ್ರದಾಯಗಳನ್ನು ಒಗ್ಗೂಡಿಸಿ ಅಭಿವೃದ್ಧಿಪಡಿಸುವುದಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಅಚಲ ಹೋರಾಟವನ್ನು ಸ್ಮರಿಸೋಣ‌ - ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​.

ಇದನ್ನೂ ಓದಿ:Independence day: ಯುವಶಕ್ತಿಯಿಂದ ಭಾರತ ವಿಶ್ವಗುರು: ಪ್ರಧಾನಿ ನರೇಂದ್ರ ಮೋದಿ

ABOUT THE AUTHOR

...view details