ಕರ್ನಾಟಕ

karnataka

ETV Bharat / bharat

ದೆಹಲಿಯ ಹಿಂಸಾಚಾರ.. 550ಕ್ಕೂ ಹೆಚ್ಚು ಟ್ವಿಟರ್ ಖಾತೆಗಳು ಅಮಾನತು..

ಜನವರಿ 26ರಂದು ಕೇಂದ್ರ ಸರ್ಕಾರ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ತಮ್ಮ ಟ್ರ್ಯಾಕ್ಟರ್ ರ್ಯಾಲಿ ಮೂಲಕ ದೆಹಲಿಗೆ ಪ್ರವೇಶಿಸಲು ಯತ್ನಿಸಿದ್ದರು. ಆದರೆ, 60 ದಿನದ ಹೋರಾಟದಲ್ಲಿ ಕಾಣದ ಕೆಲವರು ನಿನ್ನೆ ಏಕಾಏಕಿ ಬ್ಯಾರಿಕೇಡ್‌ಗಳನ್ನು ಮುರಿದು, ವಿಧ್ವಂಸಕ ಕೃತ್ಯ ನಡೆಸಿದ್ದರು..

Twitter suspends over 550 accounts
550ಕ್ಕೂ ಹೆಚ್ಚು ಟ್ವಿಟರ್ ಖಾತೆಗಳು ಅಮಾನತು

By

Published : Jan 27, 2021, 8:12 PM IST

ನವದೆಹಲಿ :ಗಣರಾಜ್ಯೋತ್ಸವ ದಿನದಂದು ರೈತ ಪ್ರತಿಭಟನೆ ವೇಳೆ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದ್ವೇಷಪೂರಿತ ಮಾಹಿತಿ ಹಂಚಿಕೊಳ್ಳುತ್ತಿದ್ದ ಸುಮಾರು 550ಕ್ಕೂ ಹೆಚ್ಚು ಖಾತೆಗಳನ್ನು ಟ್ವಿಟರ್ ಸ್ಥಗಿತಗೊಳಿಸಿದೆ.

ಮಾಧ್ಯಮ ನೀತಿ ಉಲ್ಲಂಘನೆ ಕಾರಣಕ್ಕೆ ಹಲವಾರು ಖಾತೆಗಳನ್ನು ಲೇಬಲ್ ಮಾಡಿರೋದಾಗಿ ಟ್ವಿಟರ್ ವಕ್ತಾರರು ಮಾಹಿತಿ ನೀಡಿದ್ದು, ಟ್ರೆಂಡ್‌​​ಗಳಿಗಾಗಿ ನೀತಿಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ಕೇಂದ್ರ ಸರ್ಕಾರದಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮಿತಿಗೆ ಸಡಿಲಿಕೆ: ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ?

ನೂರಾರು ಖಾತೆಗಳು ಟ್ವಿಟರ್​ ನೀತಿ ಉಲ್ಲಂಘಿಸಿವೆ. ಅಂತಹ ಖಾತೆಗಳನ್ನ ಈಗಾಗಲೇ ರದ್ದು ಮಾಡಲಾಗಿದೆ. ಅಹಿಂಸಾತ್ಮಕ ಮಾರ್ಗದಲ್ಲಿ ಟ್ವೀಟ್​ ಮಾಡುವವರನ್ನು ನಾವು ಪ್ರೋತ್ಸಾಹಿಸುತ್ತೇವೆ. ಘಟನೆಯನ್ನು ಕೂಲಂಕಷವಾಗಿ ನೋಡುತ್ತಿದ್ದೇವೆ ಎಂದು ಟ್ವಿಟರ್ ಹೇಳಿದೆ.

ಜನವರಿ 26ರಂದು ಕೇಂದ್ರ ಸರ್ಕಾರ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ತಮ್ಮ ಟ್ರ್ಯಾಕ್ಟರ್ ರ್ಯಾಲಿ ಮೂಲಕ ದೆಹಲಿಗೆ ಪ್ರವೇಶಿಸಲು ಯತ್ನಿಸಿದ್ದರು. ಆದರೆ, 60 ದಿನದ ಹೋರಾಟದಲ್ಲಿ ಕಾಣದ ಕೆಲವರು ನಿನ್ನೆ ಏಕಾಏಕಿ ಬ್ಯಾರಿಕೇಡ್‌ಗಳನ್ನು ಮುರಿದು, ವಿಧ್ವಂಸಕ ಕೃತ್ಯ ನಡೆಸಿದ್ದರು.

ಈ ವೇಳೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳು ಹಾನಿಗೊಳಗಾಗುವುದು ಮಾತ್ರವಲ್ಲದೇ, 300 ಪೊಲೀಸರು ಗಾಯಗೊಂಡರು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಟ್ಟು 22 ಎಫ್‌ಐಆರ್ ದಾಖಲಿಸಲಾಗಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 200 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ABOUT THE AUTHOR

...view details