ಚಂಡೀಗಢ(ಪಂಜಾಬ್):ಶೀಘ್ರದಲ್ಲೇ ಅತ್ಯಂತ ದೊಡ್ಡ ನಿರ್ಧಾರವನ್ನು ಘೋಷಿಸುವುದಾಗಿ ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಟ್ವೀಟ್ ಮಾಡಿದ್ದು, ಪಂಜಾಬ್ ಮಾತ್ರವಲ್ಲದೇ, ರಾಷ್ಟ್ರಮಟ್ಟದಲ್ಲೂ ತೀವ್ರ ಕುತೂಹಲ ಉಂಟಾಗಿದೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ ಟ್ವೀಟ್ ಮಾಡಿರುವ ಭಗವಂತ್ ಮಾನ್ ಪಂಜಾಬ್ ಇತಿಹಾಸದಲ್ಲಿ ಯಾರೂ ಇಲ್ಲಿಯವರೆಗೆ ಇಂತಹ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಅಂತಹ ನಿರ್ಧಾರವನ್ನು ಶೀಘ್ರದಲ್ಲಿಯೇ ಪ್ರಕಟಿಸುತ್ತೇನೆ ಎಂದು ಹಿಂದಿ ಮತ್ತು ಪಂಜಾಬಿ ಭಾಷೆಯಲ್ಲಿ ಟ್ವೀಟ್ ಮಾಡಿ, ಕುತೂಹಲ ಕೆರಳಿಸಿದ್ದಾರೆ.