ಕರ್ನಾಟಕ

karnataka

ETV Bharat / bharat

ಪ್ರಧಾನಿ ಮೋದಿ ಭೇಟಿ ಮಾಡಿದ ಭಗವಂತ್ ಮಾನ್: ₹50,000 ಕೋಟಿ ಪ್ಯಾಕೇಜ್‌ ಬೇಡಿಕೆ - ಪಂಜಾಬ್ ಸಿಎಂ ಪ್ರಧಾನಿ ಮೋದಿ ಭೇಟಿ

ಮುಖ್ಯಮಂತ್ರಿ ಆದ ಬಳಿಕ ಇದೇ ಮೊದಲ ಬಾರಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್​ ಅವರು ಪ್ರಧಾನಿ ನರೇಂದ್ರ ಮೋದಿ ಭೇಟಿಯಾದರು. ಈ ವೇಳೆ ಪಂಜಾಬ್​ ಆರ್ಥಿಕತೆಯನ್ನು ಬಲಿಷ್ಠಪಡಿಸಲು ವಾರ್ಷಿಕವಾಗಿ 50,000 ಸಾವಿರ ಕೋಟಿ ರೂ. ಪ್ಯಾಕೇಜ್ ನೀಡುವಂತೆ ಮನವಿ ಮಾಡಿದರು.

Punjab CM Bhagwant Mann meets PM
Punjab CM Bhagwant Mann meets PM

By

Published : Mar 24, 2022, 4:39 PM IST

ನವದೆಹಲಿ:ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿಯಾದರು. ಈ ವೇಳೆ ಕೆಲಹೊತ್ತು ಮಾತುಕತೆ ನಡೆಸಿರುವ ಅವರು, ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ವಿವರಿಸಿ, ಆರ್ಥಿಕ ಸ್ಥಿತಿ ಸುಧಾರಿಸಲು 50,000 ಕೋಟಿ ರೂ. ಪ್ಯಾಕೇಜ್ ನೀಡುವಂತೆ ಮನವಿ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಭಗವಂತ್ ಮಾನ್​, ರಾಷ್ಟ್ರೀಯ ಭದ್ರತೆ ಕಾಪಾಡಿಕೊಳ್ಳಲು ನಮಗೆ ಕೇಂದ್ರದ ಬೆಂಬಲ ಬೇಕು. ಪಂಜಾಬ್​ನಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಇಲ್ಲಿನ ಪರಿಸ್ಥಿತಿ ಸುಧಾರಿಸಲು ಮುಂದಿನ ಎರಡು ವರ್ಷಗಳವರೆಗೆ ಪ್ರತಿ ವರ್ಷ 50,000 ಸಾವಿರ ಕೋಟಿ ರೂ. ಪ್ಯಾಕೇಜ್​​ಗೆ ಬೇಡಿಕೆ ಇಟ್ಟಿದ್ದೇವೆ ಎಂದರು. ಇದರ ಜೊತೆಗೆ ಗಡಿ ಸಮಸ್ಯೆ, ಡ್ರಗ್ಸ್​ ಸಾಗಾಣಿಕೆ ಸೇರಿದಂತೆ ಕೆಲ ಮಹತ್ವದ ವಿಷಯಗಳ ಕುರಿತಾಗಿಯೂ ಪ್ರಧಾನಿ ಹಾಗೂ ಕೇಂದ್ರ ಸಚಿವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದರು.

ಇದನ್ನೂ ಓದಿ:ಮೋದಿ ಉಪಸ್ಥಿತಿಯಲ್ಲಿ ನಾಳೆ ಯೋಗಿ ಪ್ರಮಾಣ: 'ದಿ ಕಾಶ್ಮೀರ್ ಫೈಲ್ಸ್'​ ಚಿತ್ರತಂಡಕ್ಕೂ ಆಹ್ವಾನ

ಕಳೆದ ಕೆಲ ವಾರಗಳ ಹಿಂದೆ ಬಹಿರಂಗಗೊಂಡಿರುವ ಪಂಜಾಬ್ ಚುನಾವಣಾ ಫಲಿತಾಂಶದಲ್ಲಿ ಆಮ್​ ಆದ್ಮಿ ಪಕ್ಷ 117 ಕ್ಷೇತ್ರಗಳ ಪೈಕಿ 92ರಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ಆಪ್‌, ದೆಹಲಿ ನಂತರ ಪಂಜಾಬ್​ನಲ್ಲಿ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿದೆ.

ABOUT THE AUTHOR

...view details