ಕರ್ನಾಟಕ

karnataka

ETV Bharat / bharat

ಶಾರೂಖ್​ ಪುತ್ರ ಆರ್ಯನ್​ ಜೊತೆ ಫೋಟೋ ಕ್ಲಿಕ್ಕಿಸಿದ ಸೆಲ್ಫಿಮ್ಯಾನ್ ವಿರುದ್ಧ ಲುಕ್​ಔಟ್​ ನೋಟಿಸ್ - ಪುಣೆ ನಗರ ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತಾ

ಮಲೇಷಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸಿರುವ ಆರೋಪ ಕಿರಣ್ ಗೋಸಾವಿ ಮೇಲಿದ್ದು, ಪುಣೆ ಪೊಲೀಸರು ಆತನ ವಿರುದ್ಧ ಲುಕ್​ಔಟ್ ನೋಟಿಸ್ ಹೊರಡಿಸಿದ್ದಾರೆ.

Pune Police issues lookout notice for man in viral selfie with Aryan Khan at NCB office
ಶಾರೂಖ್​ ಖಾನ್​ ಪುತ್ರ ಆರ್ಯನ್​ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ ಸೆಲ್ಫಿಮ್ಯಾನ್ ವಿರುದ್ಧ ಲುಕ್​ಔಟ್​ ನೋಟಿಸ್

By

Published : Oct 14, 2021, 11:09 AM IST

ನವದೆಹಲಿ:ಮುಂಬೈ ಕ್ರೂಸ್​ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್​ನೊಂದಿಗೆ ಎನ್​ಸಿಬಿ ಕಚೇರಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸುದ್ದಿಯಾಗಿದ್ದ ಕಿರಣ್ ಗೋಸಾವಿ ಎಂಬಾತನ ವಿರುದ್ಧ ಪುಣೆ ನಗರ ಪೊಲೀಸರು ಲುಕ್​ಔಟ್ ನೋಟಿಸ್ ಹೊರಡಿಸಿದ್ದಾರೆ.

ಪುಣೆ ನಗರ ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತಾ ಈ ಕುರಿತು ಇನ್ನಷ್ಟು ಮಾಹಿತಿ ನೀಡಿದ್ದಾರೆ. ಕಿರಣ್ ಗೋಸಾವಿ ವಿರುದ್ಧ ಲುಕ್​ಔಟ್ ನೋಟಿಸ್ ನೀಡಲಾಗಿದೆ. ಆತನನ್ನು ದೇಶದ ಹೊರಹೋಗದಂತೆ ನಿರ್ಬಂಧಿಸಲಾಗಿದೆ. 2018ರಲ್ಲಿ ಪುಣೆ ನಗರ ಪೋಲಿಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಗೋಸಾವಿ ಬೇಕಾಗಿದ್ದಾನೆ. ಈ ಪ್ರಕರಣದ ಕುರಿತು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದಿದ್ದಾರೆ.

ಮಲೇಷಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸಿರುವ ಆರೋಪ ಕಿರಣ್ ಗೋಸಾವಿ ಮೇಲಿದ್ದು, ಮೇ 19, 2018ರಂದು ಪುಣೆ ನಗರದ ಫರಾಸ್ಕಾನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಕಿರಣ್ ಗೋಸಾವಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 419, 420ರ ಅಡಿಯಲ್ಲಿ ಹಾಗೂ ಬೌದ್ಧಿಕ ತಂತ್ರಜ್ಞಾನ (ಐಟಿ) ಕಾಯ್ದೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಅಕ್ಟೋಬರ್ 2ರಂದು ಮುಂಬೈನ ಕ್ರೂಸ್ ಹಡಗಿನಲ್ಲಿ ನಡೆದ ಎನ್​ಸಿಬಿ ದಾಳಿಯಲ್ಲಿ ಗೋಸಾವಿ ಸಾಕ್ಷಿಯಾಗಿದ್ದರು. ಇದರ ಮಧ್ಯೆ ಗೋಸಾವಿ ಎನ್​ಸಿಬಿಯ ಅಧಿಕಾರಿ ಅಥವಾ ಉದ್ಯೋಗಿ ಅಲ್ಲ ಎಂದು ಎನ್‌ಸಿಬಿ ಸ್ಪಷ್ಟನೆಯನ್ನೂ ನೀಡಿತ್ತು.

ಇದನ್ನೂ ಓದಿ:ತಂದೆ, ಎಸ್​ಪಿ, ಬಿಎಸ್​​ಪಿ ಕಾರ್ಯಕರ್ತರಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ಭದ್ರತೆ

ABOUT THE AUTHOR

...view details