ಪುದುಚೇರಿ:ಈ ಬಾರಿ ದೀಪಾವಳಿ ಹಬ್ಬಕ್ಕೆ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಸರ್ಕಾರ ಅಲ್ಲಿನ ನಾಗರಿಕರಿಗೆ ಕೊಡುಗೆಯೊಂದನ್ನು ನೀಡುತ್ತಿದೆ. ಪ್ರತಿ ಕುಟುಂಬಕ್ಕೂ 10 ಕೆ.ಜಿ ಅಕ್ಕಿ ಮತ್ತು ಎರಡು ಕೆ.ಜಿ ಸಕ್ಕರೆಯನ್ನು ಉಚಿತವಾಗಿ ನೀಡಲು ನಿರ್ಧಾರ ಮಾಡಲಾಗಿದೆ.
ಸೋಮವಾರ ಪುದುಚೇರಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಪಡಿತರ ಅಂಗಡಿಗಳ ಮೂಲಕ ಎಲ್ಲಾ ಕುಟುಂಬಗಳಿಗೆ 10 ಕೆ.ಜಿ ಅಕ್ಕಿ ಮತ್ತು ಎರಡು ಕೆ.ಜಿ ಸಕ್ಕರೆ ನೀಡಲು ನಿರ್ಧಾರ ಮಾಡಲಾಗಿದೆ.
ಇದಕ್ಕೂ ಮೊದಲು ದೀಪಾವಳಿ ಅಂಗವಾಗಿ ಕಡಿಮೆ ಬೆಲೆಯಲ್ಲಿ ಜನರಿಗೆ ಪಟಾಕಿಗಳನ್ನು ನೀಡಲು ಸರ್ಕಾರದ ಏಜೆನ್ಸಿಯಾದ ಪ್ಯಾಪ್ಸೋ ನಿರ್ಧಾರ ಮಾಡಿತ್ತು. ಸಬ್ಸಿಡಿ ಆಧಾರದಲ್ಲಿ ಪಟಾಕಿಗಳನ್ನು ನೀಡುವುದಾಗಿ ಸರ್ಕಾರ ಹೇಳಿತ್ತು.
ಇನ್ನು 2011ರ ಜನಗಣತಿಯಂತೆ 3,02,450 ಕುಟುಂಬಗಳು ಪುದುಚೇರಿಯಲ್ಲಿದ್ದು, 30,24,500 ಕೆಜಿ ಅಕ್ಕಿಯನ್ನು, 6,04,900 ಕೆಜಿ ಸಕ್ಕರೆಯನ್ನು ಈ ಬಾರಿಯ ದೀಪಾವಳಿಗೆ ಉಚಿತವಾಗಿ ನೀಡಲಿದೆ.
ಇದನ್ನೂ ಓದಿ:ನೈಜೀರಿಯಾದಲ್ಲಿ ಮಸೀದಿ ಮೇಲೆ ಬಂದೂಕುಧಾರಿಗಳ ದಾಳಿ, ಕನಿಷ್ಠ 18 ಜನರು ಸಾವು