ರಾಯ್ಪುರ (ಛತ್ತೀಸ್ಗಢ): ಕೋವಿಡ್ -19 ಎರಡನೇ ಅಲೆಯಿಂದಾಗಿ,ಛತ್ತೀಸ್ಗಢದಲ್ಲಿ ನಿತ್ಯ 15,000ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಅಧಿಕೃತ ಅಂಕಿ - ಅಂಶಗಳ ಪ್ರಕಾರ, ಮಾರಣಾಂತಿಕ ಸೋಂಕಿನಿಂದ ರಾಜ್ಯದಲ್ಲಿ ನಿತ್ಯ 200ಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ.
ಅತಿಯಾದ ಶುಲ್ಕ ವಿಧಿಸುತ್ತಿರುವ ಖಾಸಗಿ ಆಸ್ಪತ್ರೆಗಳು ಅತಿಯಾದ ಶುಲ್ಕ ವಿಧಿಸುತ್ತಿರುವ ಖಾಸಗಿ ಆಸ್ಪತ್ರೆಗಳು ಹೆಚ್ಚುತ್ತಿರುವ ಪ್ರಕರಣಗಳ ದೃಷ್ಟಿಯಿಂದ, ಕೋವಿಡ್ ರೋಗಿಗಳ ಆರೈಕೆಗೆ ಸರ್ಕಾರವು ಕೆಲವು ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಕೇರ್ ಕೇಂದ್ರಗಳಾಗಿ ಆಯ್ಕೆ ಮಾಡಿದೆ. ಆದರೆ ಈ ನಿಯಮಗಳಿಗೆ ವಿರುದ್ಧವಾಗಿ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಅತಿಯಾದ ಶುಲ್ಕವನ್ನು ವಿಧಿಸುತ್ತಿದ್ದಾರೆ.
ಅತಿಯಾದ ಶುಲ್ಕ ವಿಧಿಸುತ್ತಿರುವ ಖಾಸಗಿ ಆಸ್ಪತ್ರೆಗಳು ಅತಿಯಾದ ಶುಲ್ಕ ವಿಧಿಸುತ್ತಿರುವ ಖಾಸಗಿ ಆಸ್ಪತ್ರೆಗಳು ಪ್ರತಿದಿನ ಸಾವಿರಾರು ಜನರು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯಿಂದಾಗಿ, ಗಂಭೀರ ಸ್ಥಿತಿಯಲ್ಲಿರುವ ಜನರು ಖಾಸಗಿ ಆಸ್ಪತ್ರೆಗಳನ್ನು ಸಂಪರ್ಕಿಸುತ್ತಿದ್ದಾರೆ. 50,000 ರೂಪಾಯಿಗಳ ಮುಂಗಡ ಹಣ ಪಾವತಿಸಿದ ನಂತರವೇ, ರೋಗಿಯ ಚಿಕಿತ್ಸೆ ಪ್ರಾರಂಭವಾಗುತ್ತದೆ ಮತ್ತು 6 ದಿನಗಳ ಚಿಕಿತ್ಸೆಯ ಬಿಲ್ 1.5 ಲಕ್ಷದಿಂದ 7 ಲಕ್ಷ ರೂ.ವರೆಗೆ ಇರಲಿದೆ.
ಅತಿಯಾದ ಶುಲ್ಕ ವಿಧಿಸುತ್ತಿರುವ ಖಾಸಗಿ ಆಸ್ಪತ್ರೆಗಳು ಅತಿಯಾದ ಶುಲ್ಕ ವಿಧಿಸುತ್ತಿರುವ ಖಾಸಗಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರನ್ನು ಲೂಟಿ ಮಾಡಿರುವುದರಿಂದ ರಾಜ್ಯದ ಸ್ಥಿತಿ ಹದಗೆಟ್ಟಿದೆ ಎಂದು ಸೋಂಕಿತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.